ಮೋದಿ ಗುಣಗಾನ.. ಡಿಡಿಎಲ್ ಜೆ ಸಿನ್ಮಾ, ಸಚಿನ, ಕೊಹ್ಲಿ ಹೆಸರು ಪ್ರಸ್ತಾಪ…

330

ಅಹಮದಾಬಾದ್: ಪ್ರಧಾನಿ ಮೋದಿಯನ್ನ ನಿಜವಾದ ಸ್ನೇಹಿತನೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆದಿದ್ದಾರೆ. ಇನ್ನು ಮೋದಿ ಸಾಧನೆ ದಂತಕಥೆಯಾಗಿದೆ. ಚಾಯ್ ವಾಲಾ ಪ್ರಧಾನಿಯಾಗಿದ್ದು ಎಲ್ಲರಿಗೂ ಸ್ಪೂರ್ತಿ. ಹಗಲು ರಾತ್ರಿ ದುಡಿಯುತ್ತಿದ್ದಾರೆ. ಮೋದಿ ಅದ್ಭುತ ನಾಯಕ ಎಂದು ಮೋದಿಯನ್ನ ಟ್ರಂಪ್ ಹಾಡಿ ಹೊಗಳಿದ್ದಾರೆ.

ಮೊಟೆರಾ ಸ್ಟೇಡಿಯಂನಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತ್ನಾಡಿದ ಇವರು, ಕಳೆದ 70 ವರ್ಷಗಳಲ್ಲಿ ಭಾರತದ ಆರ್ಥಿಕತೆ 6 ಪಟ್ಟು ಹೆಚ್ಚಿದೆ. ಒಂದೇ ದಶಕದಲ್ಲಿ 27 ಕೋಟಿ ಜನ ಬಡತನದಿಂದ ಹೊರ ಬಂದಿದ್ದಾರೆ. ಪ್ರತಿ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ, ಶೌಚಾಲಯ ವ್ಯವಸ್ಥೆ ಸೇರಿದಂತೆ 6 ಕೋಟಿ ಕುಟುಂಬಗಳಿಗೆ ಗ್ಯಾಸ್ ಕೆನೆಕ್ಷನ್ ಸಿಕ್ಕಿದೆ ಎಂದರು.

ವಿಶ್ವದ ಭಯೋತ್ಪಾದನೆಗೆ ಅಮೆರಿಕ ಎಂದಿಗೂ ವಿರೋಧವಿದೆ. ಭಯೋತ್ಪಾದನೆಗೆ ಯಾವತ್ತೂ ಸಪೋರ್ಟ್ ಮಾಡುವುದಿಲ್ಲ. ಇದನ್ನ ನಾವು ಸಹಿಸುವುದಿಲ್ಲವೆಂದು ಹೇಳುವ ಮೂಲಕ ನೆರೆಯ ಪಾಕ್ ಗೆ ಎಚ್ಚರಿಕೆ ನೀಡಿದ್ದಾರೆ. ಇನ್ನು ಯಶ್ ಚೋಪ್ರಾ ನಿರ್ಮಾಣದ ಡಿಡಿಎಲ್ ಜೆ(ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ) ಚಿತ್ರವನ್ನ ಒಬಾಮಾ ಬಳಿಕ ಟ್ರಂಪ್ ನೆನಪು ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಸಚಿನ ಹಾಗೂ ವಿರಾಟ ಕೊಹ್ಲಿ ಹೆಸರನ್ನ ಪ್ರಸ್ತಾಪ ಮಾಡುವ ಮೂಲಕ ಕ್ರಿಕೆಟ್ ಜಗತ್ತಿಗೆ ಭಾರತದ ಕೊಡುಗೆ ಏನು ಅನ್ನೋದನ್ನ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!