ಕಂಚು ಗೆದ್ದ ಕುಸ್ತಿವೀರ ಭಜರಂಗ್

239

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಟೊಕಿಯೋ: ಭಾರತದ ಕುಸ್ತಿಪಟು ಭಜರಂಗ್ ಪೂನಿಯಾ ಟೊಕಿಯೋ ಒಲಿಂಪಿಕ್ಸ್ ನಲ್ಲಿ ಕಂಚು ಗೆಲ್ಲುವ ಮೂಲಕ ಮತ್ತೊಂದು ಪದಕ ತಂದಿದ್ದಾರೆ. ಫ್ರೀಸ್ಟೈಲ್ ನ 65 ಕೆಜಿ ವಿಭಾಗದ ಪಂದ್ಯದಲ್ಲಿ ಕಜಕಸ್ತಾನದ ಡೌಲೆಟ್ ನಿಯಾಜ್ ಬೆಕೊವ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ರು.

ಭಜರಂಗಿ ಪೂನಿಯಾ ಕಂಚು ಪದಕದ ಗೆಲುವಿನೊಂದಿಗೆ ಇದು ಭಾರತಕ್ಕೆ ದೊರೆತ 6ನೇ ಪದಕವಾಗಿದೆ. ಕಂಚು ಪಕದ ವೀರನಿಗೆ ಎಲ್ಲಡೆಯಿಂದ ಶುಭಾಶಯಗಳನ್ನ ತಿಳಿಸಲಾಗ್ತಿದೆ. ಹರಿಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ 2.5 ಕೋಟಿ ರೂಪಾಯಿ ಹಾಗೂ ಸರ್ಕಾರಿ ನೌಕರಿ ನೀಡುವುದಾಗಿ ಘೋಷಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!