ಕ್ರಿಕೆಟ್ ಗೆ ವಿದಾಯ ಹೇಳಿದ ಯೂಸುಫ್ ಪಠಾಣ್

242

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನವದೆಹಲಿ: ಕರ್ನಾಟಕದ ಬೌಲರ್ ವಿನಯಕುಮಾರ ನಿವೃತ್ತಿ ಘೋಷಿಸಿರುವ ಹೊತ್ತಿನಲ್ಲೇ ಆಲ್ ರೌಂಡರ್ ಯೂಸುಫ್ ಪಠಾಣ್ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಅವರು ಟ್ವೀಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

2007ರಲ್ಲಿ ಟಿ-20 ವರ್ಲ್ಡ್ ಕಪ್, 2011ರ ವಿಶ್ವ ಕಪ್ ತಂಡದಲ್ಲಿ ಯೂಸುಫ್ ಪಠಾಣ್ ಆಡಿದ್ದಾರೆ. 57 ಒನ್ ಡೇ ಪಂದ್ಯಗಳಲ್ಲಿ 2 ಶತಕ, 3 ಅರ್ಧಶತಕದೊಂದಿಗೆ 810 ರನ್ ಗಳಿಸಿದ್ದಾರೆ. 22 ಟಿ-20 ಪಂದ್ಯಗಳಲ್ಲಿ 236 ರನ್ ಗಳಿಸಿದ್ದಾರೆ.

ಇನ್ನು 100 ಪ್ರಥಮ ದರ್ಜೆಯಲ್ಲಿ ಆಡಿದ ಇವರು 4,825 ರನ್ ಗಳಿಸಿದ್ದಾರೆ. 201 ವಿಕೆಟ್ ಪಡೆದಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್, ಕೆಕೆಆರ್ ತಂಡದ ಪರ ಆಡಿದ್ದು, 174 ಪಂದ್ಯಗಳಿಂದ 3,204 ರನ್ ಗಳಿಸಿದ್ದಾರೆ. ಇದಲ್ಲಿ 13 ಅರ್ಧ ಶತಕಗಳಿವೆ. 42 ವಿಕೆಟ್ ತೆಗೆದಿದ್ದಾರೆ. ಟೀಂ ಇಂಡಿಯಾ ಮಾಜಿ ಬೌಲರ್ ಇರ್ಫಾನ್ ಪಠಾಣ್ ಸಹೋದರರಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!