ಬಾರಯ್ಯ ಬೆಳದಿಂಗಳೆ….

1390

ಬಾರಯ್ಯ ಬೆಳದಿಂಗಳೆ…

ಬರಡಾದ ಈ ನೆಲಕೆ

ಹಸಿರೊದಿಸು ಬಾ

ಜಾತಿ ಧರ್ಮದ ಜೇಡ ಕಟ್ಟಿದ

ಮನೆಮನಕ್ಕೆ ಬೆಳಕ್ಕಾಗಿ ಬಾ

ಕರುಣೆ ಮಮತೆ ಪ್ರೀತಿಯ 

ಮೂರ್ತಿ ನೀನಾಗಿ…

ಬಾರಯ್ಯ ಬೆಳದಿಂಗಳೆ….

ನಾ ಹಿಂದೂ…ನೀ ಮುಂದು…

ಅವ ಬೌದ್ದ … ಇವ ಕ್ರೈಸ್ತ…

ಇವನ್ಯಾವನೂ ಪಾರಸಿ…ಎಂದೆನುತ

ವಿಷ ಬೀಜವ ಬಿತ್ತಿ 

ಜಾತಿ ಧರ್ಮಗಳ ಹೆಸರೇಳಿ ಗೂಳಿಡುವ 

ನರಿ ತೋಳ ಹೆಗ್ಗಣಗಳ

ಮನದಾಳಕ್ಕಿಳಿದು 

ಕರುಣೆ ಮಮತೆ ಪ್ರೀತಿ

ಚಿಗುರೊಡೆಸು ಬಾ

ಬಾರಯ್ಯ ಬೆಳದಿಂಗಳೆ…

ಊರು ಕೇರಿಗಳ ಗಲ್ಲಿ ಗಲ್ಲಿಗಳಲ್ಲಿ

ಚಾಚುತ್ತಿವೆ ಕೈಗಳು ಮುಗಿಲೆತ್ತರಕ್ಕೆ 

ಧನಿ ಎತ್ತರಿಸಿ ಹೇಳುವ ನಾಲಿಗೆಗೆ ಕತ್ತರಿಯು

ಮಡುಗಟ್ಟಿದೆ ಎದೆಯೊಳಗೆ ಕಪ್ಪುಕೊರಳಿನ ಧನಿಯು

ಬೀಜದ ಹೋರಿಯಂಗೆ

ಮದವೇರಿ ಅಲಿಯುತ್ತಿದೆ

ಕಾಮುಕರ ಹಿಂಡು

ಬಾಯ್ತರೆದು ನುಂಗುತ್ತಿವೆ ಭ್ರಷ್ಟರ ದಂಡು

ಬೆಳಕ್ಕಾಗಿ ನೀ ಬಂದು ಕಣ್ತೆರೆಸು ಬಾ

ಅಲೆಯಾಗಿ ನೀ ಬಂದು ಗುರುತಳಿಸು ಬಾ

ಮಾನವತೆಯ ಮಂತ್ರ ನೀ ಕಲಿಸು ಬಾ 

ಕರುಣೆ ಮಮತೆ ಪ್ರೀತಿಯ ಮೂರ್ತಿ ನೀನಾಗಿ ಬಾ

ಬಾರಯ್ಯ ಬೆಳದಿಂಗಳೆ….

ಕವಿ ಯಶವಂತ ಕಾರ್ಗಳ್ಳಿ



Leave a Reply

Your email address will not be published. Required fields are marked *

error: Content is protected !!