ಚಂದ್ರಯಾನ-3, ಐತಿಹಾಸಿಕ ಕ್ಷಣದತ್ತ ಎಲ್ಲರ ಚಿತ್ತ

394

ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ

ಬೆಂಗಳೂರು: ಇಂದು ಭಾರತೀಯರು ಮಾತ್ರವಲ್ಲ ಇಡೀ ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿರುವ ಕ್ಷಣ ಹತ್ತಿರವಾಗುತ್ತಿದೆ. ಚಂದ್ರಯಾನ-3 ಯೋಜನೆ ಯಶಸ್ಸಿನತ್ತ ಹೊರಟಿದೆ. ಚಂದ್ರನ ಅಂಗಳದ ಮೇಲೆ ವಿಕ್ರಮ್ ಲ್ಯಾಂಡ್ ಆಗುವ ಮೂಲಕ ಐತಿಹಾಸಿಕ ಸಾಧನೆಗೆ ಇಸ್ರೋ ಸಾಕ್ಷಿಯಾಗಲಿದೆ.

15 ವರ್ಷಗಳಲ್ಲಿ ಮೂರು ಬಾರಿ ಚಂದ್ರಯಾನ ನಡೆಸಲಾಗಿದೆ. ಇಂದು ಸಂಜೆ 6 ಗಂಟೆ 4 ನಿಮಿಷಕ್ಕೆ ವಿಕ್ರಮ್ ಲ್ಯಾಂಡ್ ಆಗಲಿದೆ. ಈ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ದಶಕಗಳ ಪರಿಶ್ರಮಕ್ಕೆ ಪ್ರತಿಫಲ ಸಿಗಲಿದೆ. ಹೀಗಾಗಿ ಎಲ್ಲಡೆಯಿಂದ ಶುಭ ಹಾರೈಕೆಗಳು ಕೇಳಿ ಬರುತ್ತಿವೆ.

ವಿಕ್ರಮ್ ಲ್ಯಾಂಡರ್ ಚಂದ್ರನ ಇಳಿಯುವುದನ್ನು ನೇರ ಪ್ರಸಾರದಲ್ಲಿ ನೋಡುವ ಸಲುವಾಗಿ ಎಲ್ಲೆಡೆ ವ್ಯವಸ್ಥೆ ಮಾಡಲಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಸಂಜೆ 5.30ರಂದಿ 6.30ರ ತನಕ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡುವಂತೆ ಕೇಂದ್ರ ಸರ್ಕಾರ ತಿಳಿಸಿದೆ.




Leave a Reply

Your email address will not be published. Required fields are marked *

error: Content is protected !!