ಚಂದ್ರನೂರಿನಲ್ಲಿ ಭಾರತದ ತ್ರಿ‘ವಿಕ್ರಮ’

356

ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ

ಬೆಂಗಳೂರು: ಕೊನೆಗೆ 3ನೇ ಪ್ರಯತ್ನದಲ್ಲಿ ಭಾರತದ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಯಶಸ್ವಿಯಾಗಿ ಚಂದ್ರಯಾನ-3 ಲ್ಯಾಂಡಿಂಗ್ ಮಾಡಿದೆ. ಈ ಮೂಲಕ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಈ ಸಾಧನೆಗೆ ಎಲ್ಲೆಡೆಯಿಂದ ಶುಭಾಶಯಗಳ ಸುರಿಮಳೆ ನಡೆಯುತ್ತಿದೆ.

ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಇಳಿದಿದೆ. ಅಮೆರಿಕ, ರಷ್ಯ, ಚೀನಾದ ಬಳಿಕ ಭಾರತ ಈ ಸಾಧನೆ ಮಾಡಿದೆ. ಸರಿಯಾಗಿ ಸಂಜೆ 6ಗಂಟೆ 4 ನಿಮಿಷಕ್ಕೆ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಭಾರತೀಯರು ಉಸಿರು ಬಿಗಿ ಹಿಡಿದು ಕಾಯುತ್ತಿದ್ದ ಕ್ಷಣವನ್ನು ಕಣ್ತುಂಬಿಕೊಂಡರು. ಚಂದ್ರನ ದಕ್ಷಿಣ ಧ್ರುವ ತಲುಪಿದ ವಿಶ್ವದ ಮೊದಲ ದೇಶ ಭಾರತವಾಗಿದೆ.

ಲ್ಯಾಂಡರ್ ನಿಂದ ಹೊರಬಂದ ರೋವರ್ ನೊಂದಿಗೆ ಸಂವಹನ ನಡೆಸಲಿದೆ. ಇದರೊಂದಿಗೆ 15 ವರ್ಷಗಳ ಸತತ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಪ್ರಧಾನಿ ಮೋದಿ ಬ್ರಿಕ್ಸ್ ಶೃಂಗ ಸಭೆಗಾಗಿ ದಕ್ಷಿಣ ಆಫ್ರಿಕಾದಲ್ಲಿದ್ದು, ಅಲ್ಲಿಂದಲೇ ನೇರವಾಗಿ ಲ್ಯಾಂಡಿಂಗ್ ವಿಕ್ಷಣೆ ಮಾಡಿದರು. ನಂತರ ಇಸ್ರೋದ ವಿಜ್ಞಾನಿಗಳೊಂದಿಗೆ ಮಾತನಾಡಿದರು.

ಇಂತಹ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಂಡಾಗ ನಮಗೆ ಹೆಮ್ಮೆ ಎನಿಸುತ್ತದೆ. ಇದು ನವಭಾರತದ ಉದಯ ಎಂದು ಹೊಗಳಿದರು. ನಮ್ಮ ವಿಜ್ಞಾನಿಗಳ ಕಠಿಣ ಪರಿಶ್ರಮದಿಂದ ಇಂದು ಹಿಂದೆ ಯಾವ ದೇಶವೂ ತಲುಪದ ಜಾಗಕ್ಕೆ ನಾವು ತಲುಪಿದ್ದೇವೆ ಅಂತಾ ಹೇಳಿದರು.




Leave a Reply

Your email address will not be published. Required fields are marked *

error: Content is protected !!