ಪಂಚರಾಜ್ಯ ಫೈಟ್ ಮತಗಟ್ಟೆ ಸಮೀಕ್ಷೆ.. ಬಂಗಾಳ ದೀದಿಗೆ.. ತಮಿಳುನಾಡು ಡಿಎಂಕೆಗೆ

268

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಆಸ್ಸಾಂ ಹಾಗೂ ಪುದುಚೇರಿಗೆ ವಿಧಾನಸಭೆ ಚುನಾವಣೆ ನಡೆದಿದ್ದು, ಮೇ 2ರಂದು ಫಲಿತಾಂಶ ಬರಲಿದೆ. ಗುರುವಾರ ಮತಗಟ್ಟೆಯ ಸಮೀಕ್ಷೆ ಹೊರಬಿದ್ದಿದ್ದು ಹಲವು ಅಚ್ಚರಿಯ ಫಲಿತಾಂಶ ಬಂದಿದೆ. ವಿವಿಧ ಸುದ್ದಿವಾಹಿನಿಗಳು ನಡೆಸಿದ ಸಮೀಕ್ಷೆ ಹೀಗಿದೆ..

ರಿಪಬ್ಲಿಕ್ ಟಿವಿ ಎಕ್ಸಿಟ್ ಪೂಲ್ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 138ರಿಂದ 148 ಸ್ಥಾನ ಗೆಲ್ಲುವ ಸಾಧ್ಯತೆ. ಎಬಿಪಿ, ಸಿ ವೋಟರ್ ಪ್ರಕಾರ ಬಿಜೆಪಿ 109-121 ಸ್ಥಾನ ಪಡೆಯಲಿದೆ. ಟಿಎಂಸಿ 152-164 ಸ್ಥಾನ ಹಾಗೂ ಕಾಂಗ್ರೆಸ್ 15-25 ಸ್ಥಾನ ಪಡೆಯಲಿದೆ. ಟೈಮ್ಸ್ ನೌ ಪ್ರಕಾರ ಸಹ ದೀದಿಗೆ ಮತದಾರ ಜೈ ಎನ್ನಲಿದ್ದಾನೆ. 3ನೇ ಬಾರಿಗೆ ಸಿಎಂ ಆಗಲಿದ್ದಾರಂತೆ.

ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬರಲಿದೆ. ಆಸ್ಸಾಂನಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ 75-85 ಸ್ಥಾನ ಪಡೆಯಲಿವೆ ಎಂದು ಆಜ್ ತಕ್, ಎಎಕ್ಸ್ ಐಎಸ್ ಸಮೀಕ್ಷೆ ತಿಳಿಸಿದೆ. ಕಾಂಗ್ರೆಸ್ ಮೈತ್ರಿಕೂಟಕ್ಕೆ 40-50 ಸ್ಥಾನ ಸಿಗಲಿವೆ. ಕೇರಳದಲ್ಲಿ ಎಲ್ ಡಿಎಫ್ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಮೋದಿಗೆ ಈ ಬಾರಿಗೆ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚಿದೆ. ಮೇ 2ರಂದು ಎಲ್ಲದಕ್ಕೂ ಸ್ಪಷ್ಟ ಉತ್ತರ ಸಿಗಲಿದೆ.




Leave a Reply

Your email address will not be published. Required fields are marked *

error: Content is protected !!