ಮತದಾನೋತ್ತರ ಸಮೀಕ್ಷೆಯಲ್ಲಿ ‘ಕೈ’ ಮೇಲುಗೈ!

236

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಮುಗಿದಿದೆ. 224 ಕ್ಷೇತ್ರಗಳ ಅಭ್ಯರ್ಥಿಗಳ ರಾಜಕೀಯ ಹಣೆಬರಹವನ್ನು ಮತದಾರ ಪ್ರಭು ಬರೆದಿದ್ದು, ಮೇ 13ರ ಫಲಿತಾಂಶದಂದು ಯಾರಿಗೆ ಗೆಲುವು, ಯಾರಿಗೆ ಸೋಲು ಅನ್ನೋದು ತಿಳಿಯಲಿದೆ.

ಕೆಲವೊಂದು ಸಂಸ್ಥೆಗಳು ಮತದಾನ ಪೂರ್ವ ಹಾಗೂ ಮತದಾನೋತ್ತರ ಸಮೀಕ್ಷೆಗಳನ್ನು ನಡೆಸುತ್ತವೆ. ಇದೀಗ ಮತದಾನೋತ್ತರ ಸಮೀಕ್ಷೆ ಹೊರ ಬಿದ್ದಿದ್ದು, ಪ್ರತಿ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.

ಸಿ ವೋಟರ್ ಪ್ರಕಾರ ಕಾಂಗ್ರೆಸ್ 100-112, ಬಿಜೆಪಿ 83-95, ಜೆಡಿಎಸ್ 21-29, ಪಕ್ಷೇತರರು 2-6 ಸ್ಥಾನಗಳನ್ನು ಪಡೆಯಲಿದ್ದಾರೆ. ನವಭಾರತ್ ಪ್ರಕಾರ ಕಾಂಗ್ರೆಸ್ 106-120, ಬಿಜೆಪಿ 78-92, ಜೆಡಿಎಸ್ 25-35, ಇತರರು 2-4 ಸ್ಥಾನ, ರಿಪಬ್ಲಿಕ್-ಟಿವಿಪಿ ಪ್ರಕಾರ ಕಾಂಗ್ರೆಸ್ 94-108, ಬಿಜೆಪಿ 85-100, ಜೆಡಿಎಸ್ 24-32 ಹಾಗೂ ಇತರರು 2-6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ.

ಜನ್ ಕಿ ಬಾತ್ ಪ್ರಕಾರ ಕಾಂಗ್ರೆಸ್ 91-106, ಬಿಜೆಪಿ 94-117, ಜೆಡಿಎಸ್ 14-24, ಇತರರು 00-02 ಸ್ಥಾನ ಪಡೆಯಲಿದ್ದಾರೆ. ಝಿ ಮ್ಯಾಟ್ರಿಜ್ ಪ್ರಕಾರ ಕಾಂಗ್ರೆಸ್ 108-118, ಬಿಜೆಪಿ 79-89, ಜೆಡಿಎಸ್ 25-35, ಇತರರು 2-4 ಕ್ಷೇತ್ರಗಳಲ್ಲಿ ವಿಜಯ ಸಾಧಿಸಲಿದ್ದಾರೆ. ಟಿವಿ9-ಪೂಲ್ ಸ್ಟಾರ್ಟ್ ಪ್ರಕಾರ ಕಾಂಗ್ರೆಸ್ 99-109, ಬಿಜೆಪಿ 88-98, ಜೆಡಿಎಸ್ 24-32 ಹಾಗೂ 2-6 ಸ್ಥಾನ ಗಳಿಸಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!