ಯಾವ ಜಿಲ್ಲೆಗಳಲ್ಲಿ ಎಷ್ಟು ಮತದಾನವಾಗಿದೆ ಗೊತ್ತಾ?

147

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ-2023ರ ಮತದಾನ ಮುಗಿದಿದೆ. ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಮೇ 13 ಶನಿವಾರ ನಡೆಯುವ ಫಲಿತಾಂಶ ದಿನ ಎಲ್ಲ ಕುತೂಹಲಕ್ಕೆ ತೆರೆ ಬೀಳಲಿದೆ.

ಇನ್ನು ಮತದಾನ ಯಾವ ಭಾಗದಲ್ಲಿ ಎಷ್ಟು ಆಗಿದೆ ಎಂದು ನೋಡುವುದಾದರೆ ಹಳೆ ಮೈಸೂರು ಭಾಗದಲ್ಲಿ ಶೇಕಡ 75ರಷ್ಟು ಮತದಾನವಾಗಿದೆ. ಬೆಂಗಳೂರಲ್ಲಿ ಪ್ರತಿ ಬಾರಿಯಂತೆ ಕಡಿಮೆ ಮತದಾನವಾಗಿದ್ದು ಕೇವಲ ಶೇಕಡ 50ರಷ್ಟು ಜನರು ವೋಟ್ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಶೇ.76, ಚಿಕ್ಕಬಳ್ಳಾಪುರ ಶೇ.77, ಹಾಸನ ಶೇ.74, ಚಾಮರಾಜನಗರ ಶೇ.69, ಕೋಲಾರ ಶೇ.72, ಕೊಡಗು ಶೇ.71, ಮಂಡ್ಯ ಶೇ.76, ರಾಮನಗರ ಶೇ.79, ತುಮಕೂರು ಶೇ.76, ಉಡುಪಿ ಶೇ.74, ದಕ್ಷಿಣ ಕನ್ನಡ ಶೇ.70, ಉತ್ತರ ಕನ್ನಡ ಶೇ.68, ಶಿವಮೊಗ್ಗ ಶೇ.70, ಚಿಕ್ಕಮಗಳೂರು ಶೇ.72ರಷ್ಟು ಮತದಾನವಾಗಿದೆ.

ಇನ್ನು ದಾವಣಗೆರೆ ಶೇ.71, ಚಿತ್ರದುರ್ಗ ಶೇ.70, ಬಾಗಲಕೋಟೆ ಶೇ.70, ಬೆಳಗಾವಿ ಶೇ.68, ವಿಜಯಪುರ ಶೇ.62, ಧಾರವಾಡ ಶೇ.63, ಗದಗ ಶೇ.69, ಹಾವೇರಿ ಶೇ.73, ಕಲಬುರಗಿ ಶೇ.58, ಬಳ್ಳಾರಿ ಶೇ.68, ಕೊಪ್ಪಳ ಶೇ.71, ಯಾದಗಿರಿ ಶೇ.59, ವಿಜಯನಗರ ಶೇ.72, ಬೀದರ ಶೇ.62ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!