ಭಾರತದ 3 ಎನ್ ಜಿಓಗಳಿಗೆ ಟ್ವೀಟರ್ 110 ಕೋಟಿ ನೆರವು

296

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ನವದೆಹಲಿ: ದೇಶದಲ್ಲಿ ಕೋವಿಡ್ 2ನೇ ಅಲೆ ಜೋರಾಗಿದೆ. ದೇಶದಲ್ಲಿ ನಿತ್ಯ ಸರಿಸುಮಾರು 3 ಲಕ್ಷಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಸಾವಿರಾರು ಸಾವುಗಳು ಸಂಭವಿಸ್ತಿವೆ. ಹೀಗಾಗಿ ಭಾರತದ ನೆರವಿಗೆ ಹಲವು ದೇಶಗಳು ಮುಂದೆ ಬಂದಿವೆ. ಇದೀಗ ಟ್ವಿಟರ್ ಸಂಸ್ಥೆ ಭಾರತದಲ್ಲಿ ಕೋವಿಡ್ ಹೋರಾಟಕ್ಕಾಗಿ 3 ಎನ್ ಜಿಓಗಳಿಗೆ 15 ಮಿಲಿಯನ್ ಡಾಲರ್ ನೀಡಿದೆ. ಅಂದ್ರೆ, 110 ಕೋಟಿ ರೂಪಾಯಿ ಸಹಾಯ ಮಾಡಿದೆ.

ಈ ಬಗ್ಗೆ ಟ್ವೀಟರ್ ಸಿಇಒ ಜಾಕ್ ಡೊರ್ಸೆ ಟ್ವೀಟ್ ಮೂಲಕ ತಿಳಿಸಿದ್ದಾರೆ. ಕೇರ್, ಏಡ್ ಇಂಡಿಯಾ ಹಾಗೂ ಸೇವಾ ಅನ್ನೋ ಮೂರು ಎನ್ ಜಿಒಗಳಿಗೆ ಹಣ ನೀಡಲಾಗಿದೆ. ಇದರಲ್ಲಿ ಕೇರ್ 10 ಮಿಲಿಯನ್ ಡಾಲರ್, ಏಡ್ ಇಂಡಿಯಾ ಹಾಗೂ ಸೇವಾ ತಲಾ 2.5 ಮಿಲಿಯನ್ ಡಾಲರ್ ನೀಡಲಾಗಿದೆ.

ಆಕ್ಸಿಜನ್, ಬೆಡ್, ವ್ಯಾಕ್ಸಿನ್, ವೆಂಟಿಲೇಟರ್, ಮೆಡಿಕಲ್ ಕಿಟ್ ಬಳಕೆಗೆ ಹಾಗೂ ಬಡವರಿಗೆ, ರೈತರಿಗೆ, ಕಾರ್ಮಿಕರಿಗೆ, ಶೈಕ್ಷಣಿಕ ಕ್ಷೇತ್ರ, ಪರಿಸರ, ಮಾನವ ಹಕ್ಕುಗಳು ಸೇರಿದಂತೆ ಹಲವು ಜೀವಪರ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ತಿಳಿಸಿದೆ. ಹೀಗಾಗಿ ಈ ಮೂರು ಎನ್ ಜಿಒಗಳು ಬೇರೆ ಬೇರೆ ಸಮಾಜಮುಖಿ ಉದ್ದೇಶಗಳನ್ನಿಟ್ಟುಕೊಂಡು ಭಾರತದಲ್ಲಿ ಕೆಲಸ ಮಾಡ್ತಿದ್ದು, ಇವುಗಳಿಗೆ ಟ್ವೀಟರ್ ನೆರವು ನೀಡಿದೆ. ಪಿಎಂ ಕೇರ್ ನಿಧಿಗೆ ಹಣ ನೀಡದೆ ಎನ್ ಜಿಒಗಳಿಗೆ ನೀಡಿರುವುದು ಹಲವು ಪ್ರಶ್ನೆಗಳನ್ನ ಮೂಡಿಸಿದೆ.




Leave a Reply

Your email address will not be published. Required fields are marked *

error: Content is protected !!