ರಾಜ್ಯದಲ್ಲಿ 4 ಲಕ್ಷ ದಾಟಿದ ಸೋಂಕಿತರು

278

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇಂದಿನ ಕರೋನಾ ಹೆಲ್ತ್ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ 5773 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ 404324ಕ್ಕೆ ಏರಿಕೆಯಾಗಿದೆ. ಆದ್ರೆ, ಇಂದು ಇಳಿಮುಖ ಕಂಡಿದ್ದು ಜನರಲ್ಲಿ ಒಂದಿಷ್ಟು ನೆಮ್ಮದಿ ತಂದಿದೆ. ಇಂದು 8015 ಜನರು ಡಿಸ್ಚಾರ್ಜ್ ಆಗಿದ್ದು, 300770 ಜನರು ಇದುವರೆಗೂ ಗುಣಮುಖರಾಗಿದ್ದಾರೆ.

ಇನ್ನು 97001 ಪ್ರಕರಣಗಳು ಸಕ್ರಿಯವಾಗಿವೆ. ಇಂದು 141 ಜನರು ಸಾವನ್ನಪ್ಪಿದ್ದು 6,534ಕ್ಕೆ ಮೃತರ ಸಂಖ್ಯೆ ಏರಿಕೆಯಾಗಿದೆ. 794 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾವಾರು ಸೋಂಕಿತರ ವಿವರ ಹೀಗಿದೆ..

ಬಾಗಲಕೋಟೆ 126, ಬಳ್ಳಾರಿ 266, ಬೆಳಗಾವಿ 75, ಬೆಂ ಗ್ರಾ 77, ಬೆಂ.ನ 2942, ಬೀದರ 32, ಚಾಮರಾಜನಗರ 20, ಚಿಕ್ಕಬಳ್ಳಾಪುರ 82, ಚಿಕ್ಕಮಗಳೂರು 101, ಚಿತ್ರದುರ್ಗ 50, ದ.ಕ 152, ದಾವಣಗೆರೆ 199, ಧಾರವಾಡ 29, ಗದಗ 87, ಹಾಸನ 128, ಹಾವೇರಿ 53, ಕಲಬುರಗಿ 141, ಕೊಡಗು 11, ಕೋಲಾರ 26, ಕೊಪ್ಪಳ 139, ಮಂಡ್ಯ 169, ಮೈಸೂರು 221, ರಾಯಚೂರು 22, ರಾಮನಗರ 11, ಶಿವಮೊಗ್ಗ 150. ತುಮಕೂರು 25, ಉಡುಪಿ 113, ಉ.ಕ 77, ವಿಜಯಪುರ 112, ಯಾದಗಿರಿ 137 ಜನರಲ್ಲಿ ಸೋಂಕು ದೃಢಪಟ್ಟಿದೆ.




Leave a Reply

Your email address will not be published. Required fields are marked *

error: Content is protected !!