ಜ.28ರಂದು ನನ್ನ 6 ತಿಂಗಳ ಸಾಧನೆ ರಿಪೋರ್ಟ್: ಸಿಎಂ ಬೊಮ್ಮಾಯಿ

178

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಜನವರಿ 28ಕ್ಕೆ ನಾನು ಮುಖ್ಯಮಂತ್ರಿಯಾಗಿ ಆರು ತಿಂಗಳು ಆಗುತ್ತೆ. ನನ್ನ ಸಾಧನೆ ಬಗ್ಗೆ ಅಂದು ಜನರ ಎದರು ರಿಪೋರ್ಟ್ ಇಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

6 ತಿಂಗಳಲ್ಲಿ ತೆಗೆದುಕೊಂಡ ನಿರ್ಧಾರ, ಹೊಸ ಯೋಜನೆ, ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ನನ್ನ ಸಾಧನೆ ಕುರಿತು ಪುಸ್ತಕ ರೂಪದಲ್ಲಿ ಜನರ ಎದುರು ಇಡುತ್ತೇನೆ ಎಂದರು. ಇನ್ನು ನಾಲ್ಕು ಸಚಿವ ಸ್ಥಾನ ಖಾಲಿ ಇರುವ ಬಗ್ಗೆ ಮಾತನಾಡಿದ ಅವರು, 4 ಸಚಿವ ಸ್ಥಾನಗಳ ಭರ್ತಿ ಬಗ್ಗೆ ವರಿಷ್ಠರ ಗಮನಕ್ಕೆ ತರುತ್ತೇನೆ. ದೆಹಲಿಗೆ ಬನ್ನಿ ಎಂದರೆ ವರದಿ ಒಪ್ಪಿಸುತ್ತೇನೆ. ಸಚಿವ ಸ್ಥಾನಕ್ಕೆ ಬೇಡಿಕೆ ಇಡುವುದು ತಪ್ಪೇನಲ್ಲ ಎಂದರು.




Leave a Reply

Your email address will not be published. Required fields are marked *

error: Content is protected !!