ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ವಿಶೇಷತೆ ಏನು?

286

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ದೇಶದ ತುಂಬಾ ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಿಸಲಾಗುತ್ತಿದೆ. ಈ ಮೂಲಕ ಸಮಾಜದಲ್ಲಿ ಹೆಣ್ಣು ಮಕ್ಕಳು ವಹಿಸುವ ಪಾತ್ರದ ಬಗ್ಗೆ ತಿಳಿಯಬಹುದು. ಆಕೆಗೆ ಗೌರವ ನೀಡಬಹುದು. ಇದರ ವಿಶೇಷತೆ ಏನು? ಇದು ಯಾವಾಗಿನಿಂದ ಶುರುವಾಯಿತು ಗೊತ್ತಾ?

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಜನವರಿ 24 ಅನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಎಂದು ಘೋಷಿಸಿತು. ಇದರ ಹಿಂದಿನ ಉದ್ದೇಶ ಏನು ಅಂದರೆ, ಸಮಾಜದಲ್ಲಿ ಹೆಣ್ಣು ಸಹ ಸರಿಸಮಾನಳು. ಶಿಕ್ಷಣ, ಆರೋಗ್ಯ, ವೃತ್ತಿ ಸೇರಿದಂತೆ ಪ್ರತಿಯೊಂದು ಕ್ಷೇತ್ರಗಳಲ್ಲಿ ಆಕೆಯ ಹಕ್ಕನ್ನು ಆಕೆ ಪಡೆಯುವುದನ್ನು ತಿಳಿಸುವುದಾಗಿದೆ.

ಲಿಂಗ ಆಧಾರತಿ ತಾರತಮ್ಯವನ್ನು ಹೋಗಲಾಡಿಸುವುದು. ಹೆಣ್ಣು ಶಿಶು ಹತ್ಯೆ ತಪ್ಪಿಸುವುದು. ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಪ್ಪಿಸುವುದು ಸೇರಿದಂತೆ ಸ್ತ್ರೀಗೆ ಎಲ್ಲದರಲ್ಲೂ ಸಮಾನತೆ ನೀಡುವುದಾಗಿದೆ. ಹೀಗಾಗಿ ಜನವರಿ 24ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಿಸಲಾಗುತ್ತಿದೆ. ಪ್ರತಿ ವರ್ಷ ಒಂದೊಂದು ಘೋಷವಾಕ್ಯ ಇರುತ್ತೆ. ಈ ಬಾರಿಯ ಘೋಷವಾಕ್ಯ ಇನ್ನು ಘೋಷಣೆಯಾಗಿಲ್ಲ.




Leave a Reply

Your email address will not be published. Required fields are marked *

error: Content is protected !!