ಕಲಕೇರಿಯಲ್ಲಿ ವಿಚಿತ್ರ ಮದ್ವೆ.. ಪರಸ್ಪರ ಪ್ರೀತಿಸಿ ವಿವಾಹದ ಯುವತಿಯರು!

1641

ಕಲಕೇರಿ: ವಿಜಯಪುರ ಜಿಲ್ಲೆಯ ಕಲಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಚಿತ್ರ ಮದ್ವೆಯೊಂದು ನಡೆದಿದೆ. ಹುಡ್ಗಿಯರಿಬ್ಬರು ಪರಸ್ಪರ ಪ್ರೀತಿಸಿ ಮನೆಯವರ ವಿರೋಧದ ನಡುವೆ ಮದ್ವೆಯಾಗಿದ್ದಾರೆ. ಹೀಗಾಗಿ ತಮ್ಗೆ ರಕ್ಷಣೆ ಕೊಡಿಯೆಂದು ಹುಡ್ಗಿಯರು ಠಾಣೆ ಮೆಟ್ಟಿಲು ಏರಿರುವ ಪ್ರಕರಣ ನಡೆದಿದೆ.

ಕಲಕೇರಿ ತಾಂಡಾದ ವಿದ್ಯಾರ್ಥಿನಿ ಹಾಗೂ ಹಂದಿಗನೂರ ತಾಂಡಾದ ವಿದ್ಯಾರ್ಥಿನಿ ಇಬ್ಬರು ಬಿಎ ಬಿಎಡ್ ಪದವಿ ಪಡೆದಿದ್ದು, ಪರಸ್ಪರ ಪ್ರೀತಿಸಿ ಮದ್ವೆಯಾಗಿದ್ದಾರೆ ಎಂದು ಹೇಳಲಾಗ್ತಿದೆ. ಇದಕ್ಕೆ ಪೋಷಕರ ವಿರೋಧ ವ್ಯಕ್ತವಾದ ಕಾರಣ, ಪೊಲೀಸ್ ಠಾಣೆಗೆ ಬಂದಿದ್ದಾರೆ. ಇಲ್ಲಿ ಇವರಿಗೆ ಎಷ್ಟೇ ತಿಳಿಹೇಳಿದ್ರೂ ಕೇಳದ ಕಾರಣ, ವಿಜಯಪುರ ಮಹಿಳಾ ಸಾಂತ್ವನ ಕೇಂದ್ರಕ್ಕೆ ಇಬ್ಬರನ್ನ ಬಿಟ್ಟು ಬರಲಾಗಿದೆಯಂತೆ. ಇದನ್ನ ಕೆಲವರು ಹಾರ್ಮೋನ್ ಇನ್ ಬ್ಯಾಲನ್ಸ್ ಎಂದು ಕರೆಯುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!