ಗಂಗಾವತಿಯಲ್ಲಿ ನಿರ್ಗತಿಕರಿಗೆ ಊಟ ಸೇವೆ

279

ಗಂಗಾವತಿ:  ಕರೋನಾ ಅಟ್ಟಹಾಸದಿಂದ ಕಂಗೆಟ್ಟಿರುವ ಜನರು 21 ದಿನ ಲಾಕ್  ಡೌನಗೆ ಒಳಗಾಗಿದ್ದಾರೆ. ಹೀಗಾಗಿ ನಗರದ ಬೀದಿ ಬೀದಿಗಳಲ್ಲಿ ಬಡವರು, ನಿರ್ಗತಿಕರು, ಭಿಕ್ಷುಕರು, ಅಲೆಮಾರಿಗಳು ತುತ್ತು ಅನ್ನಕ್ಕಾಗಿ ಪರದಾಡವ ಸ್ಥಿತಿ ನಿರ್ಮಾಣವಾಗಿದೆ.

ಹೀಗೆ ಹಸುವಿನಿಂದ ಬಳಲು ಜನಕ್ಕೆ ಆಶ್ರಯ ಟ್ರಸ್ಟ್ ಬೆಂಗಳೂರು, ನಗರದ ಅಧ್ಯಕ್ಷರಾದ ವಿಜಯಕುಮಾರ ಹಾಗೂ ನೆಕ್ಕಂಟಿ ರಾಮಕೃಷ್ಣ ಕೋಟೆ ಕ್ಯಾಂಪ್, ಮಾಜಿ ನಗರಸಭೆ ಸದಸ್ಯ ವಡ್ಡರಹಟ್ಟಿ ವೀರಭದ್ರಪ್ಪ ನಾಯಕ ಇವರ ನೇತೃತ್ವದಲ್ಲಿ ದಿನನಿತ್ಯ 150 ರಿಂದ 200 ನೂರು ಜನರಿಗೆ ಊಟದ ವ್ಯವಸ್ಥೆಯನ್ನ ಮಾಡಲಾಗಿದೆ.

ಸ್ವತಃ ಇವರೇ ತಯಾರಿಸಿ ಅವರು ಇದ್ದ ಜಾಗಕ್ಕೆ ಹೋಗಿ ಅವರಿಗೆ ಕುಡಿಯುವ ನೀರು, ಅನ್ನ-ಸಾಂಬಾರ, ಮಜ್ಜಿಗೆ ನೀಡಿ ಅವರನ್ನು ಸಂತೈಸಿದ್ದಾರೆ. ಈ ಸಾಮಾಜಿಕ ಕಾರ್ಯ ಲಾಕ್ ಡೌನ್ ಮುಗಿಯುವವರೆಗೆ ಮುಂದುವರಿಸಲಾಗುವುದು ಎಂದು ನೆಕ್ಕಂಟಿ ರಾಮಕೃಷ್ಣ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!