ಬೆಂಗಳೂರು: ಸಂಜೆಯ ಕರೋನಾ ಹೆಲ್ತ್ ಬುಲೆಟಿನ್ ಬಂದಿದ್ದು, ಹೊಸದಾಗಿ 22 ಕೇಸ್ ದಾಖಲಾಗಿವೆ. ಈ ಮೂಲಕ ಇಂದು ಒಟ್ಟು 149 ಸೋಂಕಿತ ಪ್ರಕರಣಗಳು ದಾಖಲಾಗಿವೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,395ಕ್ಕೆ ಏರಿಕೆಯಾಗಿದೆ. 543 ಜನ ಡಿಸ್ಚಾರ್ಜ್ ಆಗಿದ್ದಾರೆ. 811 ಕೇಸ್ ಚಾಲ್ತಿಯಲ್ಲಿವೆ. 40 ಜನ ಸಾವನ್ನಪ್ಪಿದ್ದಾರೆ. ಇಂದು 13 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಬೀದರ 7, ಕಲಬುರಗಿ 2, ಬೆಳಗಾವಿ 2, ಉತ್ತರ ಕನ್ನಡ 1 ಹಾಗೂ ಬೆಂಗಳೂರು ಒಬ್ಬರು ಸೇರಿದಂತೆ ಒಟ್ಟು ಇಂದು 13 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.