ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ
ಕಳೆದ ವರ್ಷ 44 ಬಿಲಿಯನ್ ಡಾಲರ್ಸ್ ಗೆ ಟ್ವಿಟರ್ ಖರೀದಿಸಿದ ಉದ್ಯಮಿ, ಟೆಸ್ಲಾ ಕಂಪನಿಯ ಸಿಇಒ ಎಲನ್ ಮಸ್ಕ್, ಹಲವಾರು ಬದಲಾವಣೆಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಇದೀಗ ಟ್ವಟರ್ ಲೋಗೋ ಬದಲಾಯಿಸಿದ್ದು, ಹಕ್ಕಿ ಜಾಗದಲ್ಲಿ x ಲೋಗೋ ಬಂದಿದೆ.
ಹೌದ್, ಮಸ್ಕ್ ತಮ್ಮ ಪ್ರೊಫೈಲ್ ನಲ್ಲಿ ಹೊಸ ಲೋಗೋ ಅನಾವರಣಗೊಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಸ್ಥೆ ಲಿಂಡಾ ಯಾಕರಿನೊ, ಜೀವನದಲ್ಲಿ ಅಥವ ವ್ಯವಹಾರದಲ್ಲಿ ಮತ್ತೊಂದು ದೊಡ್ಡ ಪ್ರಭಾವ ಬೀರಲು ನಮಗೆ ಮತ್ತೊಂದು ಅವಕಾಶ ಸಿಗುವುದು ಅಪರೂಪ. ಟ್ವಿಟಟರ್ ಪ್ರಭಾವ ಬೀರಿತು ಮತ್ತು ಸಂವಹನ ನಡೆಸುವ ವಿಧಾನ ಬದಲಾಯಿಸಿದೆ. ಇನ್ನು ಮುಂದೆ ಎಕ್ಸ್ ಜಾಗತಿಕ ಮಟ್ಟದ ಚೌಕವನ್ನು ಬದಲಾಯಿಸುತ್ತೆ ಎಂದಿದ್ದಾರೆ.
ಎಲನ್ ಮಸ್ಕ್, ಟ್ವಿಟರ್ ಬಳಕೆದಾರರಿಗೆ ಒಂದಿಷ್ಟು ಷರತ್ತುಗಳನ್ನು ವಿಧಿಸುತ್ತಾ ಬಂದಿದ್ದಾರೆ. ವಿವಿಐಪಿ, ವಿಐಪಿಗಳಿಗೆ ಉಚಿತವಾಗಿ ಬ್ಲೂ ಟಿಕ್ ನೀಡಲಾಗುತಿತ್ತು. ಅದಕ್ಕೆ ಹಣ ನೀಡಬೇಕು ಎಂದರು. ಗಣ್ಯರು, ಸಮಾನ್ಯರ ನಡುವಿನ ಪ್ರೊಫೈಲ್ ಗೆ ಹೊಸ ಬಣ್ಣದ ಟಿಕ್ ಮಾರ್ಕ್ ನೀಡಿದರು. ಹೀಗೆ ಒಂದೊಂದೇ ಬದಲಾವಣೆಯನ್ನು ಮಾಡುತ್ತಾ ಬರುತ್ತಿರುವ ಮಸ್ಕ್, ಈಗ ಲೋಗೋ ಬದಲಾಯಿಸಿದ್ದಾರೆ. ಈ ಬಗ್ಗೆ ಹಲವು ರೀತಿಯ ಪ್ರತಿಕ್ರಿಯೆಗಳು ಬರುತ್ತಿವೆ.