ಗನ್ ಹಿಡಿದ ಲವರ್ ಬಾಯ್

345

ಕಾಲ್ ಕೆಜಿ ಪ್ರೀತಿ, ಪಂಚತಂತ್ರ ಚಿತ್ರಗಳಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ನಟ ವಿಹಾನಗೌಡ ಇದೀಗ ಫುಲ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾನೆ. ಎಂ.ಸುಭಾಷ ಚಂದ್ರ ನಿರ್ದೇಶನದ ಮೊದಲ ಚಿತ್ರ ‘ಲೆಗಸಿ’ಯಲ್ಲಿ ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದಾನೆ.

ಲೆಗಸಿ ಅಂದ್ರೆ ಪರಂಪರೆ ಅನ್ನೋ ಅರ್ಥವಿದೆ. ಆದ್ರೆ, ಹೀರೋ ಮಾಸ್ ಲುಕ್ ನೀಡಿದ್ದಾನೆ. ಹಾಗಾದ್ರೆ, ನಿರ್ದೇಶಕರು ಏನ್ ಕಥೆ ಹೇಳ್ತಾರೆ ಅನ್ನೋ ಕುತೂಹಲವಿದೆ. ಚಿತ್ರದ ಇನ್ ಡೋರ್ ಶೂಟಿಂಗ್ ಕಂಪ್ಲೀಟ್ ಆಗಿದೆ. ದೊಡ್ಡಬಳ್ಳಾಪುರ, ಮಡಿಕೇರಿ ಹಾಗೂ ರಾಮನಗರದ ಸುತ್ತಮುತ್ತ ಒಂದಿಷ್ಟು ಚಿತ್ರೀಕರಣ ಬಾಕಿ ಉಳಿದಿದೆ.

ನಿರ್ದೇಶಕ ಎಂ.ಸುಭಾಷ ಚಂದ್ರ

ವಿಹಾನಗೆ ದೀಪ್ತಿ ಸತಿ ಜೋಡಿಯಾಗಿದ್ದಾರೆ. ಸುರೇಶರಾಜ ಮ್ಯೂಜಿಕ್, ಸುಂದರ ಪಂಡಿಯಾನ್ ಕ್ಯಾಮೆರಾ ವರ್ಕ್ ಇದೆ. ಚಿತ್ರದ ಪೋಸ್ಟರ್ ಗಳು ನೋಡುಗರನ್ನ ಸೆಳೆಯುತ್ತಿವೆ. ಕುರುಕ್ಷತ್ರ ಚಿತ್ರಕ್ಕೆ ಸಹನಿರ್ದೇಶಕನಾಗಿದ್ದ ಎಂ.ಸುಭಾಷ ಚಂದ್ರ ಲೆಗಸಿ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!