ತಿಂಗಳು ಕಳೆದ್ರೂ ಸಿಂದಗಿಯ ಮರ್ಡರ್ ಕೇಸ್ ಕಿಲ್ಲರ್ಸ್ ಸಿಕ್ಕಿಲ್ಲ: ಎಸ್ಪಿ ಏನಂದ್ರು?

411

ಪ್ರಜಾಸ್ತ್ರ ಫಾಲೋಅಪ್ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿರುವ ಐಸಿಐಸಿಐ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಹತ್ಯೆ ಪ್ರಕರಣ ನಡೆದು ಒಂದು ತಿಂಗಳು ಕಳೆದಿದೆ. ಆಗಸ್ಟ್ 24ರ ಮಧ್ಯರಾತ್ರಿ 25ರ ಬೆಳಗಿನ ಜಾವದ ನಡುವೆ ನಡೆದ ಎಟಿಎಂ ಸೆಕ್ಯೂರಿಟಿ ಗಾರ್ಡ್ ಹತ್ಯೆಯ ಹಂತಕರ ಸುಳಿವು ಇಂದಿಗೂ ಸಿಕ್ಕಿಲ್ಲ.

ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಮೂವರು ಹಂತಕರು ಅದರಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಬೇರೆ ಸಿಸಿಟಿವಿ ಕ್ಯಾಮೆರಾ ಸಹ ಸರಿಯಾಗಿ ಕೆಲಸ ಮಾಡ್ತಿಲ್ಲ ಅನ್ನೋದಕ್ಕೆ ದೃಶ್ಯಗಳೆ ಸಾಕ್ಷಿಯಾಗಿವೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದಿರುವ ಖತರ್ನಾಕ್ ಕಿರಾತಕರು ಕಳ್ಳತನಕ್ಕೆ ಬಂದು ಅನ್ಯಾಯವಾಗಿ ಒಂದು ಜೀವವನ್ನ ಬಲಿ ಪಡೆದಿದ್ದಾರೆ. ಇದುವರೆಗೂ ಅವರ ಸುಳಿವು ಮಾತ್ರ ಸಿಕ್ಕಿಲ್ಲ.

ಸಿಪಿಐ ಎಸ್.ಎಂ ಪಾಟೀಲ ಅವರನ್ನ ಕೇಳಿದಾಗ, ಕ್ರೈಂ ವಿಭಾಗದ ಟೀಂ ತನಿಖೆ ಮಾಡ್ತಿದ್ದು, ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲವೆಂದು ಹೇಳಿದ್ರು.

ಸ್ಥಳೀಯ ಪೊಲೀಸ್ ಇಲಾಖೆ ಮಟ್ಟದಲ್ಲಿ ತಂಡ ರಚನೆ ಮಾಡಿದ್ದು, ತನಿಖೆ ನಡೆಯುತ್ತಿದೆ. ಪಿಎಸ್ಐ ಅವರಿಗೆ ಕೋವಿಡ್ 19 ಆಗಿರುವುದ್ರಿಂದ ವಿಶ್ರಾಂತಿಯಲ್ಲಿದ್ದು, ಈ ಬಗ್ಗೆ ಗಮನ ಹರಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳುತ್ತೇನೆ.

ಅನುಪಮ ಅಗರ್ವಾಲ್, ಎಸ್ಪಿ, ವಿಜಯಪುರ

ಸೆಕ್ಯೂರಿಟಿ ಹತ್ಯೆಯ ಪ್ರಕರಣದಿಂದ ಸಿಂದಗಿ ಜನತೆ ನಿಜಕ್ಕೂ ಆತಂಕದಲ್ಲಿದ್ದಾರೆ. ಇಲ್ಲಿನ ಎಟಿಎಂಗಳಿಗೆ ರಾತ್ರಿ ವೇಳೆ ಸೆಕ್ಯೂರಿಟಿ ಗಾರ್ಡ್ ಗಳ ನೇಮಕ ಮಾಡಲು ಸಹ ಹಿಂದುಮುಂದು ನೋಡುವ ಪರಿಸ್ಥಿತಿ ಎದುರಾಗಿದ್ದು, ಬಹುತೇಕ ಎಟಿಎಂಗಳು 8 ಗಂಟೆಯ ನಂತರ ಬಂದ್ ಆಗ್ತಿವೆ. ಇದ್ರಿಂದಾಗಿ ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ಎಟಿಎಂ ಸೇವೆ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಇಲಾಖೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಒಂದಿಷ್ಟು ಕ್ರಮಗಳನ್ನ ತೆಗೆದುಕೊಳ್ಳಬೇಕಿದೆ.




Leave a Reply

Your email address will not be published. Required fields are marked *

error: Content is protected !!