ಬಂಗಾಳ ಬೆಂಕಿ..!

377
ಬಿಜೆಪಿ ಮತ್ತು ಟಿಎಂಸಿ ರೋಡ್ ಶೋ ಹಿಂಸಾರೂಪ ದೇಶವನ್ನು ತಲೆ ತಗ್ಗಿಸುವಂತೆ ಮಾಡಿದೆ. ದ್ವೇಷ ರಾಜಕಾರಣಕ್ಕೆ ಇಡೀ ಪಶ್ಚಿಮ ಬಂಗಾಳನಲ್ಲಿ ಇದೀಗ ಬರೀ ಹಿಂಸಾಚಾರ. ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ಮಾರಾಮಾರಿಯಾಗಿದೆ. ಇದರಿಂದಾಗಿ ಬಹಿರಂಗ ಪ್ರಚಾರಕ್ಕೆ ಇನ್ನು 48 ಗಂಟೆ ಇರುವಾಗ್ಲೇ ಅಂತ್ಯಕ್ಕೆ ಆದೇಶ ನೀಡಲಾಗಿದೆ.
ಬಂಗಾಳದಲ್ಲಿನ ದಂಗಲ್ ನಿಂದ ಇಡೀ ರಾಜ್ಯ ಕಂಗಾಲಾಗಿದೆ. ಈ ರೀತಿಯ ವರ್ತನೆ ಎಷ್ಟರ ಮಟ್ಟಿಗೆ ಸರಿ ಅನ್ನೋದು ತಿಳಿಯುತ್ತಿಲ್ಲ. 42 ಸ್ಥಾನಗಳಲ್ಲಿ ತಮ್ಮ ಸಾಮ್ರಾಜ್ಯ ಸ್ಥಾಪಿಸಬೇಕು ಅನ್ನೋ ಬಿಜೆಪಿ ಹಾಗೂ ಟಿಎಂಸಿ ಪಕ್ಷಗಳ ಜಿದ್ದಿನಿಂದಾಗಿ ಸಾಮಾನ್ಯ ಜನರು ಸಾವು, ನೋವು ಅನುಭವಿಸುತ್ತಿರುವುದು ಪ್ರಜಾತಂತ್ರ ವ್ಯವಸ್ಥೆಯನ್ನು ಅವಮಾನ ಮಾಡಿದಂತಾಗುತ್ತಿದೆ. ಪಶ್ವಿಮ ಬಂಗಾಳದ 42 ಕ್ಷೇತ್ರಗಳಿಗಾಗಿ 7 ಹಂತಗಳಲ್ಲಿ ಚುನಾವಣೆ ನಡೆಸಲಾಗ್ತಿದ್ದು, ಇದರಲ್ಲಿ 6 ಹಂತಗಳು ಕಂಪ್ಲೀಟ್ ಆಗಿವೆ. ಕಂಪ್ಲೀಟ್ ಆದ ಆರು ಹಂತಗಳಲ್ಲಿ ಹಿಂಸಾಚಾರ ನಡೆದಿದೆ. ಇದು ಈ ಎರಡು ಪಕ್ಷಗಳ ಟ್ರಿಕ್ಸ್ ಅನ್ನದೇ ಬೇರೆ ಏನ್ ಹೇಳಬೇಕು. ಮೋದಿ ಹಾಗೂ ದೀದಿ ಒಬ್ಬರಿಗೊಬ್ಬರು ಮೊನಚು ಮಾತುಗಳಿಂದಲೇ ಇರಿಯುತ್ತಿದ್ದಾರೆ. ಇದು ಸಾಲದು ಅಂತಾ ಅಧಿಕಾರ ಹಿಡಿತಕ್ಕಾಗಿ ಈಗ ಅಮಾಯಕರ ರಕ್ತ ಹರಿಯುತ್ತಿದೆ.
ನಿಲ್ಲದ ಹಿಂಸೆ
42 ಕ್ಷೇತ್ರಗಳಿಗೆ 7 ಹಂತದ ಮತದಾನ
6 ಕ್ಷೇತ್ರಗಳಲ್ಲಿ ಮತದಾನ ಕಂಪ್ಲೀಟ್
ನಡೆದ 6 ಕ್ಷೇತ್ರಗಳ ವೋಟಿಂಗ್ ವೇಳೆ ಹಿಂಸಾಚಾರ
ಮೇ 19ಕ್ಕೆ ಕೊನೆಯ ಹಂತದ ಮತದಾನ
ವೋಟಿಂಗ್ ಮೊದ್ಲೇ ಹೊತ್ತಿ ಉರಿದ ಬಂಗಾಳ
ಪ್ರತಿಮೆ ವಾರ್ :
ಹಿಂಸಾಚಾರದ ವೇಳೆ ಬಂಗಾಳದ ಲೇಖಕ ಹಾಗೂ ಸಮಾಜ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ರಾಜಕೀಯ ಲೆಕ್ಕಾಚಾರಕ್ಕಾಗಿ ಟಿಎಂಸಿಯೇ ಈ ಪಿತೂರಿ ನಡೆಸಿದೆ ಅಂತಾ ಬಿಜೆಪಿ ಆರೋಪಿಸಿದೆ. ಇದು ಬಿಜೆಪಿ ನಡೆಸಿರುವ ದಬ್ಬಾಳಿ, ದೌರ್ಜನ್ಯಕ್ಕೆ ಸಾಕ್ಷಿ. ಅವರಿಂದಲ್ಲೇ ಹಿಂಸೆ ನಡೆಯುತ್ತಿದೆ ಅನ್ನೋದು ಟಿಎಂಸಿ ಆರೋಪ.
ಮೋದಿ ವರ್ಸಸ್ ದೀದಿಯಾಗಿ ಪರಿಣಮಿಸಿರುವ ಬಂಗಾಳದಲ್ಲಿ ಬಿಜೆಪಿ ರ್ಯಾಲಿಗೆ ಅಲ್ಲಿನ ಸರ್ಕಾರ ಅನುಮತಿ ನೀಡಲ್ಲ. ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಬಿಡಲ್ಲ. ರೋಡ್ ಶೋ ನಡೆಸಲು ಅವಕಾಶ ಕೊಡಲ್ಲ. ಟಿಎಂಸಿ ಕಾರ್ಯಕರ್ತರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಅಂತಾ ಹೇಳುವ ಮೂಲಕ ಬಿಜೆಪಿ ತನ್ನ ಗೆಲುವಿನ ಸಂಖ್ಯೆಯನ್ನ ಹೆಚ್ಚು ಮಾಡಿಕೊಳ್ಳುವ ತವಕದಲ್ಲಿದೆ.
ಬಂಗಾಳದಲ್ಲಿ ತನ್ನ ಶಕ್ತಿ ಏನು ಅನ್ನೋದನ್ನ ತೋರಿಸಬೇಕು ಅಂತಾ ಪಣ ತೊಟ್ಟಿರುವ ಸಿಎಂ ಮಮತಾ ಬ್ಯಾನರ್ಜಿ, ಕೇಸರಿ ಪಡೆಯ ನಾಯಕರ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ. ತಮ್ಮ ನೆಲದಲ್ಲಿ ಬಿಜೆಪಿಗೆ ನೆಲೆ ಇಲ್ಲದಂತೆ ಮಾಡಬೇಕು. ಯಾವುದೇ ಕಾರಣಕ್ಕೂ ಬಿಜೆಪಿಗೆ ಲಾಭವಾಗಬಾರದು. 42 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ, ಮೋದಿ ಮೇನಿಯಾ ಅನ್ನೋ ಟ್ರೆಂಡ್ ಗೆ ಕೊಡಲಿಪೆಟ್ಟು ನೀಡಬೇಕು ಅಂತಿದ್ದಾರೆ ದೀದಿ. ಇದರ ಪರಿಣಾಮ ಇದೀಗ ಬಂಗಾಳ ಹೊತ್ತಿ ಉರಿಯುತ್ತಿದೆ.



Leave a Reply

Your email address will not be published. Required fields are marked *

error: Content is protected !!