ಉಪ ಕದನ: ನಾಯಕರ ಇಡೀ ದಿನದ ಟಾಕಿಂಗ್ ಹೈಲೆಟ್ಸ್

369

ರಾಜ್ಯದಲ್ಲಿ ಉಪ ಚುನಾವಣೆಯ ಕಣ ರಂಗೇರುತ್ತಿದೆ. ಬಹಿರಂಗ ಪ್ರಚಾರಕ್ಕೆ ಇನ್ನು ಮೂರು ದಿನಗಳು ಉಳಿದಿವೆ. ಹೀಗಾಗಿ 15 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸಿದ್ದಾರೆ. ಇವತ್ತು ಯಾರು ಯಾರ ಮೇಲೆ ಏನು ಆರೋಪ ಮಾಡಿದ್ರು ಅನ್ನೋದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಉಪ ಚುನಾವಣೆ ಧರ್ಮಯುದ್ಧ ಇದ್ದಂತೆ. ಇದರಲ್ಲಿ ಧರ್ಮ ಗೆಲ್ಲುತ್ತೆ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಗೋಕಾಕ ಕ್ಷೇತ್ರದಲ್ಲಿ ಪ್ರಚಾರ ನಡೆಸಿರುವ ಅವರು ಸಹೋದರ ರಮೇಶ ಜಾರಕಿಹೊಳಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಕಾಂಗ್ರೆಸ್ ಎಲ್ಲವನ್ನು ನೀಡಿತ್ತು. ಎರಡ್ಮೂರು ಶಾಸಕರನ್ನ ಇಟ್ಟುಕೊಂಡು ಸಿಎಂಗೆ ಬ್ಲ್ಯಾಕ್ ಮೇಲ್ ಮಾಡ್ತಾರೆ. ಇದು ಅವರ ಜಾಯಿಮಾನ ಎಂದು ವಾಗ್ದಾಳಿ ನಡೆಸಿದ್ರು.

ಅನರ್ಹ ಶಾಸಕರಿಗೆ ತಮ್ಮ ಸ್ವಾರ್ಥದಿಂದ ಸಾರ್ವಜನಿಕರ ಹಣ ವ್ಯರ್ಥವಾಗ್ತಿದೆ ಅನ್ನೋ ಕಾಳಜಿಯಿಲ್ಲ. ಅವರ ಕಣ್ಮುಂದೆ ಸೂಟ್ ಕೇಸ್ ಹಾಗೂ ಕುರ್ಚಿ ಕಾಣ್ತಿದೆ ಅಂತಾ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಬೆಳಗಾವಿಯಲ್ಲಿ ವಾಗ್ದಾಳಿ ನಡೆಸಿದ್ರು. ಕಾಗವಾಡ ಕ್ಷೇತ್ರದ ಮದಬಾವಿಯಲ್ಲಿ ಪ್ರಚಾರ ಮಾಡಿದ ಅವರು, ಅನರ್ಹರು ರಾಜಕಾರಣದಲ್ಲಿ ಇರಲು ನಾಲಾಯಕರು. ಇವರು ಗೆದ್ದರೆ ಜನಸೇವೆ ಮಾಡುವರೇ ಅಂತಾ ಕೆಂಡ ಕಾರಿದ್ರು.

ಇನ್ನು ರಾಣೇಬೆನ್ನೂರಿನಲ್ಲಿ ಮಾತ್ನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜೆಡಿಎಸ್ ನವರು ಕ್ರಾಸ್ ವೋಟಿಂಗ್ ಹಾಗೂ ದೊಡ್ಡ ಆಪರೇಷನ್ ಮಾಡಿದ್ದು ಸಿದ್ದರಾಮಯ್ಯ ಅಂತಾ ಟೀಕಿಸಿದ್ರು. ಕೆ.ಬಿ ಕೋಳಿವಾಡ ಬಳಸಿಕೊಂಡು ಜೆಡಿಎಸ್ ಶಾಸಕರಿಂದ ವೋಟ್ ಹಾಕಿಸಿಕೊಂಡು ಆಪರೇಷನ್ ಮಾಡಿದ್ದು ಸಿದ್ದರಾಮಯ್ಯ ಅಂತಾ ತಿರುಗೇಟು ನೀಡಿದ್ರು.

ಡಿ.ಕೆ ಶಿವಕುಮಾರ ವಿರುದ್ಧ ವಾಗ್ದಾಳಿ ನಡೆಸಿದ ರಮೇಶ ಜಾರಕಿಹೊಳಿ, ನಾನು 1985ರಲ್ಲಿ 1 ಸಾವಿರ ವೋಟಿನಿಂದ ಸೋತೆ. ಅವರು 40 ಸಾವಿರ ಮತಗಳ ಅಂತರದಿಂದ ಸೋತಿದ್ರು ಅಂತಾ ತಿವಿದ್ರು. ಲಿಂಗಾಯಿತರು, ಹಿದೂಳಿದವರ ನಡುವೆ ಜಗಳ ಹಚ್ಚಿದವರು. ನಾನು ಪ್ರಭಾಕರ ಕೋರೆ ಒಂದಾದ್ರೆ ಉಳಿಗಾಲವಿಲ್ಲವೆಂದು ಗೊತ್ತಿದೆ ಅಂತಾ ಗುಡುಗಿದ್ರು.

ಸಿದ್ದರಾಮಯ್ಯ ಸಾವಿನ ಕುರಿತು ಮಾತ್ನಾಡಿದ್ದ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದು ಸರಿಯಲ್ಲ. ಚುನಾವಣೆಯಲ್ಲಿ ವೈಯಕ್ತಿಕ ಟೀಕೆ ಆಗಬಾರದು ಅಂತಾ ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ರು. ಚುನಾವಣೆಯಲ್ಲಿ ಆರೋಪ ಪ್ರತ್ಯಾರೋಪ ಸರಿ. ಅವರು ನನ್ಗೆ ಬೈಯಲಿ. ನಾವು ಕೂಡಾ ಬೈಯೋಣ. ಆದ್ರೆ, ಅದು ವೈಯಕ್ತಿಕ ಹಾಗೂ ಕುಟುಂಬ ಬೇಡವೆಂದು ಹೇಳುವ ಮೂಲಕ ಈಶ್ವರಪ್ಪ ಹೇಳಿಕೆಯನ್ನ ಖಂಡಿಸಿದ್ರು.

ಹೊಸಕೋಟೆಯಲ್ಲಿ ಮಾತ್ನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ, ಮತ್ತೆ ಆಪರೇಷನ್ ಕಮಲವಾದ್ರೆ ಜನ ದಂಗೆ ಏಳುತ್ತಾರೆ ಅಂತಾ ಹೇಳಿದ್ರು. ಶಾಸಕ ಬಿ ನಾಗೇಂದ್ರ ಅನಾರೋಗ್ಯದಿಂದಾಗಿ ಪ್ರಚಾರಕ್ಕೆ ಬಂದಿಲ್ಲ. ಅವರೂ ಸೇರಿ ಯಾರೂ ಬಿಜೆಪಿಗೆ ಹೋಗವುದಿಲ್ಲ ಅಂತಾ ಹೇಳಿದ್ರು. ಡಿಸೆಂಬರ್ 9ರ ನಂತರ ಮಹತ್ತರ ರಾಜಕೀಯ ಬದಲಾವಣೆ ಆಗಲಿವೆ ಅಂತಾ ಹೇಳಿದ್ರು.

ಪ್ರದೇಶಿಕ ಪಕ್ಷಗಳು ದೇಶದ ಹಿತಕ್ಕಾಗಿ ಅಲ್ಲ. ಅವು ಕುಟುಂಬದ ಹಿತಕ್ಕಾಗಿ ಎಂದು ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ ಹೇಳಿದ್ದಾರೆ. ಜೆಡಿಎಸ್ ಹೆಚ್.ಡಿ ದೇವೇಗೌಡ ಅವರ ಖಾಸಗಿ ಕಂಪನಿಯಾಗಿದೆ ಅಂತಾ ಟೀಕಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!