ಬಂದಾಳದಲ್ಲಿ ಮೆಕ್ಕೆಜೋಳ ಕ್ಷೇತ್ರೋತ್ಸವ

594

ಸಿಂದಗಿ: ಬಂದಾಳ ಗ್ರಾಮದ ಹೊರವಲಯದಲ್ಲಿನ ಡಾ.ಸಂಗಮೇಶ ಪಾಟೀಲ ಅವರ ಹೊಲದಲ್ಲಿ ನೂಜಿವಿಡು ಸಿಡ್ಸ್ ಕಂಪನಿ ಮೆಕ್ಕೆಜೋಳ ಕ್ಷೇತ್ರೋತ್ಸವ ಆಯೋಜಿಸಿತ್ತು. ಈ ವೇಳೆ ಮಾತ್ನಾಡಿದ ನಿವೃತ್ತ ಕೃಷಿ ಅಧಿಕಾರಿ ವಿ.ಬಿ ಕರುಡೆ, ರೈತರು ಸಮಗ್ರ ಬೆಳೆ ಬಿತ್ತನೆ ಮೂಲಕ ಆರ್ಥಿಕ ಜೀವನ ಹೆಚ್ಚಿಸಿಕೊಳ್ಳಬೇಕು ಅಂತಾ ಹೇಳಿದ್ರು.

ನೂಜಿವಿಡು ಸಿಡ್ಸ್ ಕಂಪನಿ ಪ್ರಾದೇಶಿಕ ವ್ಯವಸ್ಥಾಪಕ ಗೋಪಾಲ ಟಿ.ಎಸ್. ಮಾತನಾಡಿ, ನೂಜಿವಿಡು ಸಿಡ್ಸ್ ಕಂಪನಿ ಅಡಿಯಲ್ಲಿ ಹತ್ತಿ, ಮೆಕ್ಕೆಜೋಳ, ಗೋಧಿ, ತೊಗರಿ ಬೆಳೆಗಳ ನೂತನ ತಳಿಗಳನ್ನ ಅವಿಸ್ಕಾರ ಮಾಡಲಾಗಿದೆ. ಈ ತಳಿಗಳ ಬೀಜಗಳನ್ನ ಬಿತ್ತನೆಯಿಂದ ಹೆಚ್ಚು ಇಳುವರಿ ಪಡೆಯಬಹುದು ಅಂತ ತಿಳಿಸಿದ್ರು. ಇದೆ ವೇಳೆ ಪ್ರಗತಿ ಪರ ರೈತ ಡಾ.ಸಂಗಮೇಶ ಪಾಟೀಲ ಅವರನ್ನ ಸನ್ಮಾನಿಸಲಾಯ್ತು.

ಡಾ.ಎ.ಆರ್.ಪಾಟೀಲ, ರಾಜುಗೌಡ ಪಾಟೀಲ, ಶರಣು ಸಾತಿಹಾಳ, ಡಾ.ಮಹಾಂತೇಶ ಹಿರೇಮಠ, ಚನ್ನು ಪಟ್ಟಣಶೆಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷ ದೊಡ್ಡಪ್ಪ ಮಂಗೊಡಿ, ಸದಸ್ಯ ಚೌಡಪ್ಪ ಕುಂಬಾರ, ಕೊಕಟನೂರ, ಕನ್ನೊಳ್ಳಿ, ಬಂದಾಳ, ಚಿಕ್ಕಸಿಂದಗಿ ಗ್ರಾಮದ ರೈತರು ಸೇರಿದಂತೆ ಸೂತ್ತಮೂತ್ತಲಿನ ರೈತರು ಕ್ಷೇತ್ರೋತ್ಸವದಲ್ಲಿ ಭಾಗವಹಿಸಿದ್ದರು.

ಓದುಗರ ಗಮನಕ್ಕೆ



Leave a Reply

Your email address will not be published. Required fields are marked *

error: Content is protected !!