ಪ್ರಚಾರದ ವೇಳೆ ಮಹಿಳೆಗೆ ಮುತ್ತು ಕೊಟ್ಟು ಬಿಜೆಪಿ ಅಭ್ಯರ್ಥಿ

78

ಪ್ರಜಾಸ್ತ್ರ ಸುದ್ದಿ

ಕೊಲ್ಕತ್ತಾ: ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಮಹಿಳೆಯೊಬ್ಬರಿಗೆ ಮುತ್ತು ಕೊಟ್ಟಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾ ಉತ್ತರ ಕ್ಷೇತ್ರದಲ್ಲಿ ನಡೆದಿದೆ. ಸಂಸದ ಖಗೇನ್ ಮುರ್ಮು 2ನೇ ಬಾರಿಗೆ ಸ್ಪರ್ಧಿಸಿದ್ದು, ಪ್ರಚಾರದ ವೇಳೆ ಮಹಿಳೆಯೊಬ್ಬರಿಗೆ ಮುತ್ತು ಕೊಟ್ಟಿದ್ದಾರೆ.

ಶ್ರೀಹರಿಪುರ ಊರಿನಲ್ಲಿ ಮತಯಾಚನೆ ಮಾಡಲು ಹೋದಾಗ ಖಗೇನ್ ಮುರ್ಮು ಈ ರೀತಿ ನಡೆದುಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ವಿಪಕ್ಷಗಳು ವಾಗ್ದಾಳಿ ನಡೆಸಿವೆ. ಬಿಜೆಪಿಯವರ ಪ್ರಕಾರ ನಾರಿ ಸಮ್ಮಾನ್ ಇದಾಗಿದೆ ಎಂದು ಟಿಎಂಸಿ ನಾಯಕಿಯರು ಖಂಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!