ಅಕ್ರಮ ಕಟ್ಟಡ ನಿರ್ಮಾಣ ಆರೋಪ: ಕಂಗನಾ ಕಚೇರಿಗೆ ಬಿತ್ತು ಸೀಲ್

279

ಪ್ರಜಾಸ್ತ್ರ ಸುದ್ದಿ

ಮುಂಬೈ: ನಟಿ ಕಂಗನಾ ರನೌತ್ ಹಾಗೂ ಮುಂಬೈ ಸರ್ಕಾರದ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಹೀಗಾಗಿ ಇಂದು ನಟಿ ಕಂಗನಾ, ಅಕ್ರಮ ಕಟ್ಟಡ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲ, ಅವರ ಕಚೇರಿಯನ್ನ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ದವರು ಸೀಲ್ ಮಾಡಿದ್ದಾರೆ.

ನನ್ನ ಸ್ನೇಹಿತರು ವಿರೋಧ ಮಾಡಿರುವುದ್ರಿಂದ ಕಚೇರಿಯನ್ನ ಬುಲ್ಡೋಜರ್ ತಂದು ಕೆಡವಿ ಹಾಕಿಲ್ಲ. ಬದಲಾಗಿ ಬಿಎಂಸಿ ಅಧಿಕಾರಿಗಳು ಸೀಲ್ ಹಾಕಿದ್ದಾರೆ. ಇದನ್ನ ನೋಡಿದ್ರೆ ನನ್ಗೆ ತುಂಬಾ ಕಷ್ಟಗಳು ಎದುರಾಗಬಹುದು ಎಂದು ಟ್ವೀಟ್ ಮಾಡಿದ್ದಾರೆ. ಅಲ್ದೇ, ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ನನ್ನ ಮೇಲೆ ಇರಲಿ ಎಂದು ಮನವಿ ಮಾಡಿದ್ದಾರೆ.

ಬಾಂದ್ರಾದಲ್ಲಿ ನಟಿ ಕಂಗನಾ, ನಿಯಮಗಳನ್ನ ಮೀರಿ ಕಟ್ಟಡ ನಿರ್ಮಿಸಿದ್ದಾರೆ ಎಂದು ಸೆಕ್ಷನ್ 354ರ ಅಡಿಯಲ್ಲಿ ಬಿಎಂಸಿ ನೋಟಿಸ್ ಅಂಟಿಸಿದೆ. ಕಂಗನಾ, ಸ್ವತಃ ಅಕ್ರಮ ಕಟ್ಟಡ ನೆಲಸ ಮಾಡದಿದ್ರೆ, ಕಠಿಣ ಕ್ರಮಗಳನ್ನ ತೆಗೆದುಕೊಳ್ಳಬೇಕಾಗುತ್ತೆ ಎಂದಿದ್ದಾರೆ. ಇದನ್ನ ನೋಡಿದ್ರೆ ನಟಿ ಕಂಗನಾ ವಿರುದ್ಧ ಸರ್ಕಾರ ವೈಯಕ್ತಿ ದಾಳಿಗೆ ಮುಂದಾಗಿದೆ ಎನಿಸ್ತಿದೆ.




Leave a Reply

Your email address will not be published. Required fields are marked *

error: Content is protected !!