ತನ್ನ ವಕೀಲನ ಮಗಳ ಮೇಲೂ ಕಣ್ಣು ಹಾಕಿದ್ನಾ ಟ್ರಂಪ್?

312

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಇನ್ನೇನು ಡೇಟ್ ಫಿಕ್ಸ್ ಆಗಬೇಕಿದೆ. ಈ ನಡುವೆ ಅಧ್ಯಕ್ಷ ಟ್ರಂಪ್ ವಿರುದ್ಧ ಭರ್ಜರಿ ಆರೋಪಗಳು ಕೇಳಿ ಬರ್ತಿವೆ. ಟ್ರಂಪ್ ಮಾಜಿ ಲಾಯರ್ ಒಬ್ಬರು ಬರೆದ ಪುಸ್ತಕದಲ್ಲಿ, ತನ್ನ ಮಗಳ ಮೇಲೆ ಕಣ್ಣು ಹಾಕಿದ್ರು ಎಂದು ಹೇಳಿದ್ದಾರೆ.

ನಿಮ್ಮ ಮಗಳು ತುಂಬಾ ಹಾಟ್ ಆಗಿದ್ದಾಳೆ. ಅವಳು ಇಷ್ಟು ಹಾಟ್ ಆಗಿದ್ದು ಯಾವಾಗಿನಿಂದ ಎಂದು ನನ್ಗೆ ಕೇಳಿದ್ರು. ಆಗ ನನ್ಗೆ ತೀವ್ರ ಮುಜುಗರವಾಯ್ತು. ಅವಳು ನನ್ನ ಮಗಳು ಸರ್. ಆಕೆಗಿನ್ನು 15 ವರ್ಷ ಅಂದಿದ್ದೆ. ಆದ್ರೂ ಟ್ರಂಪ್ ಆಕೆ ಮೇಲೆ ಕಣ್ಣು ಹಾಕಿದ್ದ ಎಂದು ಮಾಜಿ ಲಾಯರ್ ಮೈಕಲ್ ಕೋಹೆನ್ ಎಂಬುವರು ಗಂಭೀರ ಆರೋಪ ಮಾಡಿದ್ದಾರೆ.

‘Disloyal: The True Story of the Former personal attorney to President Donald J.Trump’ ಅನ್ನೋ ಪುಸ್ತಕದಲ್ಲಿ ಮೈಕಲ್ ಕೋಹೆನ್ ಈ ಬಗ್ಗೆ ಬರೆದಿದ್ದಾರಂತೆ. ಇಷ್ಟೇ ಅಲ್ಲ, ತನ್ನ ಮಗಳ ಬಗ್ಗೆಯೇ ಕೆಟ್ಟದಾಗಿ ಮಾತ್ನಾಡಿದ್ದ ಎಂದಿದ್ದಾರೆ. ಜಗತ್ತಿನ ಶ್ರೇಷ್ಠ ಸುಂದರಿ ಇವಳು. ಇವಳನ್ನ ನಾನೇ ಸೃಷ್ಟಿ ಮಾಡಿದ್ದೇನೆ. 6 ಅಡಿ ಎತ್ತರದ ಸುಂದರ ದೇಹವನ್ನ ಹೊಂದಿದ್ದಾಳೆ. ನನ್ನ ಮಗಳು ಅಲ್ಲದಿದ್ರೆ ನಾನೇ ಇವಳನ್ನ ಮದುವೆಯಾಗ್ತಿದ್ದೆ ಎಂದು ಕೆಟ್ಟದಾಗಿ ಹೇಳಿದ್ರು ಅಂತಾ ಮೈಕಲ್ ಕೋಹೆನ್ ಹೇಳಿದ್ದಾರೆ. ಆದ್ರೆ, ಇದನ್ನ ವೈಟ್ ಹೌಸ್ ತಿರಸ್ಕಾರ ಮಾಡಿದೆ.

ಮಗಳೊಂದಿಗೆ ಮೈಕಲ್ ಕೋಹೆನ್

ಟ್ರಂಪ್ ಬಗ್ಗೆ ಅಣ್ಣನ ಮಗಳು ಮೇರಿ ಕೂಡಾ ಆಕ್ರೋಶ ಹೊರ ಹಾಕಿದ್ಳು. ಆಕೆಯೂ ಬರೆದ ಪುಸ್ತಕದಲ್ಲಿ ಟ್ರಂಪ್ ವಿಶ್ವದ ಅತ್ಯಂತ ಭಯಾನಕ ಮನುಷ್ಯ ಎಂದಿದ್ದಾಳೆ. ಈ ಹಿಂದೆ ಟ್ರಂಪ್ ವಿರುದ್ಧ ಪೋರ್ನ್ ಸ್ಟಾರ್ ಆರೋಪಿಸಿದ್ಳು. ಆಕೆಗೆ ಕೋರ್ಟ್ ನಿಂದ ದುಡ್ಡು ಸಹ ನೀಡಲಾಯ್ತು. ಹೆಣ್ಮಕ್ಕಳು ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಇದೆ ಮೊದಲಲ್ಲ, ಹಲವು ಬಾರಿ ಗಂಭೀರ ಆರೋಪಗಳು ಕೇಳಿ ಬಂದಿವೆ. ಇದು ಈ ಬಾರಿಯ ಚುನಾವಣೆಯಲ್ಲಿ ಟ್ರಂಪ್ ಗೆ ತಿರುಗುಬಾಣವಾಗುವ ಲಕ್ಷಣಗಳಿವೆ.

ಟ್ರಂಪ್ ಪುತ್ರಿ ಇವಾಂಕ್



Leave a Reply

Your email address will not be published. Required fields are marked *

error: Content is protected !!