ಬಹುಮಹಡಿ ಕಟ್ಟಡ ಕುಸಿತ: 50 ಜನರು ಸಿಲುಕಿರುವ ಶಂಕೆ

262

ಪ್ರಜಾಸ್ತ್ರ ಸುದ್ದಿ

ರಾಯಗಢ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಬಹುಮಹಡಿ ಕಟ್ಟಡವೊಂದು ಕುಸಿದು ಬಿದ್ದಿದೆ. ಇದರ ಅಡಿಯಲ್ಲಿ ಸಿಲುಕಿದ್ದವರನ್ನ ರಕ್ಷಣೆ ಮಾಡಲಾಗ್ತಿದೆ. ಈಗಾಗ್ಲೇ 25 ಜನರನ್ನ ರಕ್ಷಿಸಲಾಗಿದೆ. ಇನ್ನು 50 ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಸಂಜೆ ಸುಮಾರು 6.30ರ ಸಮಯದಲ್ಲಿ ತಾರಿಕ್ ಗಾರ್ಡನ್ ಅನ್ನೋ ಬಹುಮಹಡಿ ಕಟ್ಟಡ ಕುಸಿದು ಬಿದ್ದಿದೆ. ಘಟನಾ ಸ್ಥಳಕ್ಕೆ ಎನ್ ಡಿಆರ್ ಎಫ್ ತಂಡ ಭೇಟಿ ನೀಡಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿವೆ. 5 ಅಂತಸ್ತಿನ ಕಟ್ಟಡದಲ್ಲಿ 47 ಪ್ಲಾಟ್ ಗಳಿದ್ದು, 150 ಜನರು ವಾಸವಾಗಿದ್ರು ಎಂದು ತಿಳಿದು ಬಂದಿದೆ. ಆದ್ರೆ, ಘಟನೆ ನಡೆದ ಸಮಯದಲ್ಲಿ ಎಷ್ಟು ಜನರು ಇದ್ದರು ಗೊತ್ತಿಲ್ಲವೆಂದು ಹೇಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!