ಖೋಖೋ ಟೀಂ ಮಾಜಿ ನಾಯಕಿಗೆ ಅರ್ಜುನ ಪ್ರಶಸ್ತಿ

299

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಔರಂಗಾಬಾದ್: ಭಾರತದ ಮಹಿಳಾ ಖೋಖೋ ತಂಡದ ಮಾಜಿ ನಾಯಕಿ ಸಾರಿಕಾ ಕಾಳೆಗೆ 2020ನೇ ಸಾಲಿನ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ನೀಡಲಾಗಿದೆ. ಸಾರಿಕಾ ಸಧ್ಯ ಮಹಾರಾಷ್ಟ್ರದಲ್ಲಿ ಕ್ರೀಡಾಧಿಕಾರಿಯಾಗಿದ್ದಾರೆ. ಆಗಸ್ಟ್ 26ರಂದು ನಡೆಯುವ ರಾಷ್ಟ್ರಪತಿಗಳ ವರ್ಚುವಲ್ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

2016ರ ದಕ್ಷಿಣ ಏಷ್ಯಾ ಗೇಮ್ಸ್ ನಲ್ಲಿ ಭಾರತ ತಂಡವನ್ನ ಸ್ವರ್ಣ ಪದಕದತ್ತ ಮುನ್ನಡೆಸಿದ್ದಾರೆ. ಆ ಟೂರ್ನಿಯಲ್ಲಿ ಬೆಸ್ಟ್ ಪ್ಲೇಯರ್ ಪ್ರಶಸ್ತಿ ಸಹ ಪಡೆದ್ರು. 13ನೇ ವಯಸ್ಸಿಗೆ ಖೋಖೋ ಆಡಲು ಶುರು ಮಾಡಿದ ಸಾರಿಕಾ, ದಿನಕ್ಕೆ ಒಂದೇ ಹೊತ್ತು ಊಟ ಮಾಡ್ತಿದ್ರಂತೆ. ಅಜ್ಜ, ಅಜ್ಜಿಯ ದುಡಿಮೆ.. ತಾಯಿಯ ಹೊಲಿಗೆ ಕೆಲಸ.. ಅನಾರೋಗ್ಯದಿಂದ ಬಳಲುತ್ತಿದ್ದ ತಂದೆ.

ಸುಮಾರು 10 ವರ್ಷಗಳ ಕಾಲ ಒಂದು ಹೊತ್ತು ಊಟ ಮಾಡ್ತಿದ್ದ ಸಾರಿಕಾ ಇಂದು ಖುಷಿಯಾಗಿದ್ದು, ಖೋಖೋ ಎಲ್ಲವನ್ನ ನೀಡಿದೆ ಎಂದಿದ್ದಾರೆ. ಇದೀಗ ಸರ್ಕಾರಿ ನೌಕರಿಯಲ್ಲಿದ್ದು 27 ವರ್ಷದ ಸಾರಿಕಾಗೆ ಅರ್ಜುನ ಪ್ರಶಸ್ತಿ ಸಂದಿದೆ.




Leave a Reply

Your email address will not be published. Required fields are marked *

error: Content is protected !!