ಕ್ಯಾಪ್ಟನ್ ಮಿಲ್ಲರ್ ಟೀಸರ್ ಬಿಡುಗಡೆ

196

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ತಮಿಳು ನಟ ಧನುಷ್ ಹುಟ್ಟು ಹಬ್ಬಕ್ಕೆ ಅವರ ಮುಂದಿನ ಸಿನಿಮಾ ಕ್ಯಾಪ್ಟನ್ ಮಿಲ್ಲರ್ ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದೆ. ಬ್ರಿಟಿಷ್ ರೊಂದಿಗೆ ಹೋರಾಟ ನಡೆಸಿದ ಈ ನೆಲದ ಪಡೆಯ ಮತ್ತೊಂದು ಕಥೆಯನ್ನು ಹೊತ್ತು ಈ ಚಿತ್ರ ಬರುತ್ತಿದೆ.

ಒಂದೂವರೆ ನಿಮಿಷದ ಟೀಸರ್ ನೋಡಿದ ಪ್ರತಿಯೊಬ್ಬರು ಖುಷಿಯಾಗಿದ್ದಾರೆ. ಮತ್ತೊಂದು ಯಶಸ್ಸಿನ ಮೂವಿ ನೀಡಲು ಧನುಷ್ ರೆಡಿ ಎನ್ನುತ್ತಿದ್ದಾರೆ. ಇನ್ನು ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ರಂಜನಿಕಾಂತ್ ಜೊತೆ ಜೈಲರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಅವರ ಅಳಿಯ ಧನುಷ್ ಜೊತೆಗೆ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದು, ಶಿವಣ್ಣನ ಅಭಿಮಾನಿಗಳಿಗೂ ಖುಷಿಯಾಗಿದೆ. ಸಂದೀಪ್ ಕಿಶನ್, ಪ್ರಿಯಾಂಕಾ ಮೋಹನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅರುಣ್ ಮತೇಶ್ವರನ್ ಕಥೆಯ ಜೊತೆಗೆ ನಿರ್ದೇಶನ ಸಹ ಮಾಡಿದ್ದಾರೆ. ಸೇಂಥಿಲ್ ತ್ಯಾಗರಾಜನ್ ಹಾಗೂ ಅರುಣ್ ತ್ಯಾಗರಾಜನ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಜಿ.ವಿ ಪ್ರಕಾಶ್ ಮ್ಯೂಸಿಕ್ ಇದೆ. ಸಿದ್ದಾರ್ಥ್ ನುನಿ ಕ್ಯಾಮೆರಾ ಕೈಚಳಕವಿದೆ. ಡಿಸೆಂಬರ್ 15ಕ್ಕೆ ಸಿನಿಮಾ ರಿಲೀಸ್ ಆಗಲಿದೆ.




Leave a Reply

Your email address will not be published. Required fields are marked *

error: Content is protected !!