ರಜನಿ ಬಳಿಕ ಧನುಷ್ ಗೆ ಶಿವಣ್ಣ ಸಾಥ್

123

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಚಂದನವನದಲ್ಲಿ ತಮ್ಮದೆ ಛಾಪು ಮೂಡಿಸಿದ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್, ಪರಭಾಷೆಗಳ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ರಿಮೇಕ್ ಸಿನಿಮಾಗಳನ್ನು ಸಹ ಮಾಡಲಿಲ್ಲ. 120ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಶಿವಣ್ಣ, ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗೆ ಜೈಲರ್ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡುವ ಮೂಲಕ ತಮಿಳು ದುನಿಯಾಗೆ ಎಂಟ್ರಿ ಕೊಟ್ಟಿದ್ದಾರೆ.

ಜೈಲರ್ ಶೂಟಿಂಗ್ ಕಂಪ್ಲೀಟ್ ಮಾಡಿರುವ ಶಿವಣ್ಣ, ನಟ ಧನುಷ್ ಜೊತೆಗೂ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಯೆಸ್, ನಟ ಧನುಷ್ ನಟನೆಯ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಶಿವಣ್ಣ ಕಾಣಿಸಿಕೊಳ್ಳುತ್ತಿದ್ದಾರಂತೆ. ಸ್ವತಂತ್ರಪೂರ್ವದಲ್ಲಿ ನಡೆಯುವ ಕಥೆಯಲ್ಲಿ ಧನುಷ್ ಅಣ್ಣನಾಗಿ ಶಿವಣ್ಣ ನಟಿಸುತ್ತಿದ್ದಾರಂತೆ.

ಅರುಣ್ ಮಾಥೇಶ್ವರನ್ ಈ ಚಿತ್ರದ ನಿರ್ದೇಶಕರು. ಸತ್ಯ ಜ್ಯೋತಿ ಫಿಲ್ಮ್ ಜೊತೆಗೆ ಮಾರನ್ ಪ್ರೊಡಕ್ಷನ್ ಹೌಸ್ ಸಿನಿಮಾ ನಿರ್ಮಾಣ ಮಾಡುತ್ತಿದೆ. ಇನ್ನು ಶಿವಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶ್ರೀನಿ ನಿರ್ದೇಶನದ ಘೋಸ್ಟ್, ಯೋಗರಾಜ್ ಭಟ್ ರೊಂದಿಗೆ ಕರಟಕ ಧಮನಕ, ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಚಿತ್ರ, ಭೈರತಿ ರಣಗಲ್ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!