ಕಾರು ಅಪಘಾತ ಸ್ಥಳದಲ್ಲೇ ಐವರ ಸಾವು

375

ಕಲಬುರಗಿ: ಕಲಬುರಗಿ ತಾಲೂಕಿನ ಸಾವಳಗಿ ಕ್ರಾಸ್ ಬಳಿ ರಸ್ತೆ ಬದಿಗೆ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೂವರಿಗೆ ಗಂಭೀರ ಗಾಯಗಳಾಗಿವೆ.

29 ವರ್ಷದ ಸಂಜುಕುಮಾರ, 26 ವರ್ಷದ ರಾಣಿ ಸಂಜಯ, 2 ವರ್ಷದ ಧೀರಜ ಸಂಗಣ್ಣ, 3 ವರ್ಷದ ಶ್ರೇಯಸ ಸಂಜಯ ಹಾಗೂ 22 ವರ್ಷದ ಭಾಗ್ಯಶ್ರೀ ಭೀಮಾಶಂಕರ ಆಲಗಿ ಮೃತ ದುರ್ದೈವಿಗಳಾಗಿದ್ದಾರೆ.

ಕಲಬುರಗಿ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಆಗಮಿಸಿರುವ ಪೊಲೀಸ್ರು ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!