5ನೇ ಬಾರಿಗೆ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್

167

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಸತತ 5ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. 2019-2023ರ ವರೆಗೂ ಬಜೆಟ್ ಮಂಡಿಸಿದ್ದಾರೆ. ಆರ್ಥಿಕ ವರ್ಷದಲ್ಲಿ ಬಜೆಟ್ ಮಂಡಿಸಿದ ಇಂದಿರಾ ಗಾಂಧಿ ನಂತರದ 2ನೇ ಮಹಿಳಾ ನಿರ್ಮಲಾ ಸೀತಾರಾಮನ್ ಆಗಿದ್ದಾರೆ.

ಇಂದು ಮಂಡಿಸಿದ ಬಜೆಟ್ ನ ಪ್ರಮುಖ ಅಂಶಗಳು ಹೀಗಿವೆ..

ಕೊರೊನಾ ನಿಯಂತ್ರಣಕ್ಕಾಗಿ 220 ಕೋಟಿ ಡೋಸ್ ವ್ಯಾಕ್ಸಿನ್ ನೀಡಲಾಗಿದೆ

ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿ

2.40 ಲಕ್ಷ ಕೋಟಿ ರೂಪಾಯಿ ರೈಲ್ವೆಗೆ ಮೀಸಲು

14 ಕೋಟಿ ರೈತರಿಗೆ ಈವರೆಗೆ 2.7 ಲಕ್ಷ ಕೋಟಿ ರೂಪಾಯಿ ವಿಮೆ ಹಂಚಿಕೆ

ಕೃಷಿ ಯೋಜನೆಗಳಲ್ಲಿ ಸ್ಟಾರ್ಟ್ ಅಪ್ ಗಳಿಗೆ ಆದ್ಯತೆ

ಹೈದರಾಬಾದ್ ನಲ್ಲಿ ಸಿರಿಧಾನ್ಯಗಳ ಶ್ರೀ ಅನ್ನ ಸಂಶೋಧನಾ ಕೇಂದ್ರ ಸ್ಥಾಪನೆ

ದೇಶದ ಸಹಕಾರಿ ಸಂಘಗಳನ್ನು ಒಂದೇ ಸೂರಿನಡಿ ತರಲು ಸಂಕಲ್ಪ

157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ

ಮೀನುಗಾರಿಕೆಗೆ 6,000 ಕೋಟಿ ರೂಪಾಯಿ ಮೀಸಲು

ಉಚಿತ ಆಹಾರ ಧಾನ್ಯ ವಿತರಣೆ ಒಂದು ವರ್ಷ ವಿಸ್ತರಣೆ

ಈವರೆಗೆ 47 ಕೋಟಿ ಜನಧನ್ ಖಾತೆಗಳು ಆರಂಭವಾಗಿವೆ

ಕರಕುಶಲ ಕರ್ಮಿಗಳಿಗೆ ನೂತನ ಯೋಜನೆ

ಪ್ರಧಾನಿ ವಿಶ್ವಕರ್ಮ ಕೌಶಲ್ಯ ಯೋಜನೆ ಘೋಷಣೆ

ಸಿರಿ ಧಾನ್ಯಗಳ ಕೃಷಿಗೆ ಹೊಸ ಯೋಜನೆ

ಆಧಾರ್, ಯುಪಿಐ, ಕೋವಿನ್ ಡಿಜಿಟಲೀಕರಣದ ಮೂರು ಸಾಧನೆಗಳಿಗೆ ವಿಶ್ವ ಮಾನ್ಯತೆ

ಪ್ರಸಕ್ತ ವರ್ಷದಲ್ಲಿ ಆರ್ಥಿಕತೆ ಶೇಕಡ 7 ರಷ್ಟು ವೃದ್ಧಿ

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಗೆ 2 ಲಕ್ಷ ಕೋಟಿ ಮೀಸಲು. ಮುಂದಿನ ಒಂದು ವರ್ಷಕ್ಕೆ ಯೋಜನೆ ವಿಸ್ತರಣೆ

ಭಾರತ ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆ

ದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ವಿಶೇಷ ಒತ್ತು

ಶಿಕ್ಷಕರ ತರಬೇತಿಗೆ ಆದ್ಯತೆ, ಜಿಲ್ಲಾ ಶಿಕ್ಷಣ ಕೇಂದ್ರಗಳ ಉನ್ನತೀಕರಣ

ವೈದ್ಯಕೀಯ ಶಿಕ್ಷಣದಲ್ಲಿ ಹೊಸ ಪಠ್ಯಕ್ರಮ

ಸಾರ್ವಜನಿಕರಿಗೆ ಪ್ರಾದೇಶಿಕ ಭಾಷೆಯಲ್ಲಿ ಸಾಂಕ್ರಾಮಿಕ ರೋಗಗಳ ಮಾಹಿತಿ

ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಐಸಿಎಂಆರ್ ಲ್ಯಾಬ್ ಗಳ ಸ್ಥಾಪನೆ‌

ಮಹಿಳೆಯರು, ಯುವಕರು, ರೈತರು, ಎಸ್ಸಿ/ಎಸ್ಟಿ ಸಮುದಾಯಗಳಿಗೆ ಮನ್ನಣೆ




Leave a Reply

Your email address will not be published. Required fields are marked *

error: Content is protected !!