ವಾಹನ ಸವಾರರೇ ಎಚ್ಚರ: ‘ಎಲೆಕ್ಟ್ರಾನಿಕ್ಸ್ ಚಿಪ್’ನಿಂದ ಪೆಟ್ರೋಲ್ ಮೋಸ ಪತ್ತೆ

536

ಪ್ರಜಾಸ್ತ್ರ ಸುದ್ದಿ

ಹೈದ್ರಾಬಾದ್: ಪೆಟ್ರೋಲ್ ಬಂಕ್ ಗಳಲ್ಲಿ ಎಲೆಕ್ಟ್ರಾನಿಕ್ಸ್ ಚಿಪ್ ಮೂಲಕ ಗ್ರಾಹಕರಿಗೆ ಮೋಸ ಮಾಡಿ ಕೋಟ್ಯಾಂತರ ರೂಪಾಯಿ ಹಣ ಮಾಡುವುದು ಪತ್ತೆಯಾಗಿದೆ. ಆಂಧ್ರ ಹಾಗೂ ತೆಲಂಗಾಣ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ 33 ಪೆಟ್ರೋಲ್ ಬಂಕ್ ಗಳನ್ನ ಸೀಜ್ ಮಾಡಲಾಗಿದೆ.

ವಾಹನಗಳಿಗೆ ಇಂಧನ ತುಂಬ ಮಷಿನ್ ಗೆ ಎಲೆಕ್ಟ್ರಾನಿಕ್ಸ್ ಚಿಪ್ ಅಳವಡಿಸಿ, ಮೀಟರ್ ನಲ್ಲಿ ಸರಿಯಾದ ಅಂಕಿ ಬರುವಂತೆ ಮಾಡಲಾಗುತ್ತೆ. ಆದ್ರೆ, ಇಂಧನ ಮಾತ್ರ ಕಡಿಮೆ ಬಂದಿರುತ್ತೆ. ಪ್ರತಿ ಸಾವಿರ ಮಿಲಿ ಲೀಟರ್ ಗೆ 970 ಮಿಲಿ ಲೀಟರ್ ಬರುವಂತೆ ಮಾಡಿದ್ರು. ಇದಕ್ಕೆ ಸಂಬಂಧಿಸಿದಂತೆ 17 ಪಂಪ್ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್, 9 ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಪ್ರೈವೆಟ್ ಲಿಮಿಟೆಡ್, 2 ಹಿಂದೂಸ್ಥಾನ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್, 2 ಎಎಸ್ಆರ್ ಗೆ ಸೇರಿದ ಬಂಕ್ ಗಳನ್ನ ಸೀಜ್ ಮಾಡಲಾಗಿದೆ.

ಆಂಧ್ರ, ತೆಲಂಗಾಣ ಪೊಲೀಸರು, ಮಾಪನಶಾಸ್ತ್ರ ವಿಭಾಗದ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಈ ಜಾಲವನ್ನ ಪತ್ತೆ ಮಾಡಲಾಗಿದೆ ಎಂದು ಸೈಬರಬಾದ್ ಪೊಲೀಸ್ ಆಯುಕ್ತ ವಿ.ಸಿ ಸಜ್ಜನ ತಿಳಿಸಿದ್ದಾರೆ. 14 ಇಂಟಿಗ್ರೇಟೆಡ್ ಚಿಪ್ಸ್, 8 ಡಿಸ್ ಪ್ಲೇಗಳು, 3 ಜಿಬಿಆರ್ ಕೇಬಲ್, 1 ಮದರ್ ಬೋರ್ಡ್ ಹಾಗೂ 1 ಹುಂಡೈ ಐ20 ಕಾರನ್ನ ವಶಕ್ಕೆ ಪಡೆದಿದ್ದು, ಮೂವರನ್ನ ಬಂಧಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!