ಚೀಫ್ ಇಂಜಿನಿಯರ್ ಕುಲಕರ್ಣಿಯ ನೂರಾರು ಕೋಟಿ ಅಕ್ರಮ ಬಯಲು

251

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಗುರುವಾರ ಎಸಿಬಿ ಅಧಿಕಾರಿಗಳು ರಾಜ್ಯದ ವಿವಿಧ ಕಡೆ 9 ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಅದರಲ್ಲಿ ಸಿಲಿಕಾನ್ ಸಿಟಿಯ ಚೀಫ್ ಇಂಜಿನಿಯರ್ ಆರ್.ಪಿ ಕುಲಕರ್ಣಿಯ ಅಕ್ರಮ ಬಯಲಾಗ್ತಾನೆ ಇದೆ. ಅಕ್ರಮ ದಂಧೆಯ ಚೀಫ್ ಇಂಜಿನಿಯರ್ ರೀತಿ ಈತ ಲೂಟಿ ಹೊಡೆದಿದ್ದಾನೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು ಸೇರಿದಂತೆ ಕುಲಕರ್ಣಿ ಹೆಸರಲ್ಲಿ ಹತ್ತಾರು ಪ್ರಾಪರ್ಟಿಗಳಿವೆ. ಒಂದೊಂದು ಆಸ್ತಿಯ ಬೆಲೆ ಕೋಟಿ ಕೋಟಿ ಬೆಲೆ ಬಾಳುತ್ತವೆ. ಅವುಗಳ ವಿವರ ಹೀಗಿದೆ ನೋಡಿ.

ಜಯನಗರದ ಡಿಕಾಕ್ಸೋ ಅಪಾರ್ಟ್ಮೆಂಟ್- 3 ಕೋಟಿ ಬೆಲೆ

ಬನಶಂಕರಿಯ ಸ್ಟರ್ಲಿನ್ ಅಪಾರ್ಟ್ಮೆಂಟ್ – 2.8 ಕೋಟಿ ಬೆಲೆ

ಸರ್ಜಾಪುರದ ಕಾನ್ಫಿಡೆಂಟ್ ಎಂಟಿಲಾ ಅಪಾರ್ಟ್ಮೆಂಟ್- 2.3 ಕೋಟಿ ಬೆಲೆ

ಮೈಸೂರು ಶರ್ಲೋಮ್ ಸನ್ ಅಪಾರ್ಟ್ಮೆಂಟ್ – 1.3 ಕೋಟಿ ಬೆಲೆ

ರಾಜಾಜಿನಗರದಲ್ಲಿರೋ ಬೆಂಗಳೂರು ಒನ್ ಅಪಾರ್ಟ್ಮೆಂಟ್ ನಲ್ಲಿ ಎರಡು ಫ್ಲ್ಯಾಟ್. ಒಂದೊಂದು ಫ್ಲ್ಯಾಟ್ ನಿಂದ ತಲಾ ಒಂದುವರೆ ಲಕ್ಷ ರೂಪಾಯಿ ಬಾಡಿಗೆ ಪಡೆಯುತ್ತಿದ್ದ ಕುಲಕರ್ಣಿ.

ಅತ್ತಿಬೆಲೆಯಲ್ಲಿ ಉಪಕಾರ ಗ್ರೀನ್ ಅಪಾರ್ಟ್ಮೆಂಟ್

ಉತ್ತರಹಳ್ಳಿ ಬಳಿಯಲ್ಲಿ ಡಬಲ್ ಸೈಟ್ ನಲ್ಲಿ ಮನೆ

ದೇವನಹಳ್ಳಿಯ ಕೊಂಡೇನಹಳ್ಳಿಯ ಡಬಲ್ ಸೈಟ್

10 ಲಕ್ಷ ಬಿಟ್ ಕಾಯಿನ್ ಶೇರ್ಸ್

50 ಲಕ್ಷ ರೂಪಾಯಿಯ ಚಿನ್ನಾಭರಣ,ಬೆಳ್ಳಿಯ ಸಾಮಾಗ್ರಿ

ಆಕ್ಸಿಸ್ ಬ್ಯಾಂಕ್ ನಲ್ಲಿ 2.5 ಕೋಟಿ ಎಫ್ ಡಿ ಹಾಗೂ 15 ವಿವಿಧ ಬ್ಯಾಂಕ್ ನಲ್ಲಿ ಅಕೌಂಟ್ ಗಳಿವೆ.

ಕೊಟ್ಯಾಕ್ ಬ್ಯಾಂಕ್, ಆಕ್ಸಿಸ್, ಎಚ್ ಡಿ ಎಫ್ ಸಿ ಸೇರಿದಂತೆ ಬ್ಯಾಂಕ್ ಖಾತೆಯಲ್ಲಿ ತಲಾ ಐದತ್ತು ಲಕ್ಷ

ಆಕ್ಸಿಸ್ ಬ್ಯಾಂಕ್ ಒಂದರಲ್ಲೇ 22 ಲಕ್ಷ ರೂಪಾಯಿ

ಮಾಯಾದೇವಿ ಆಂಡ್ ಕೋ ಹಾಗೂ ಕೆಮ್ ಟೆಕ್ ಕಂಪೆನಿ ಸೇರಿ ಸಾಕಷ್ಟು ಕಂಪೆನಿಗಳನ್ನ ನಡೆಸಿ ಮುಚ್ಚಿರುವ ಬಗ್ಗೆ ಮಾಹಿತಿ ಇದೆ. ಹೀಗೆ ನೂರಾರು ಕೋಟಿ ಪ್ರಾಪರ್ಟಿ ಮೇಲೆ ಬಂಡಾವಳ ಹೂಡಿದ ಆರ್.ಪಿ ಕುಲಕರ್ಣಿಯ ಆಸ್ತಿ ಬಗೆದಷ್ಟು ಹೊರ ಬರ್ತಿದೆ.




Leave a Reply

Your email address will not be published. Required fields are marked *

error: Content is protected !!