ಯುವಕನ ಸಾವಿಗೆ ಪತ್ನಿ ಮತ್ತು ಅವನು ಕಾರಣನಾ?

262

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಬಾಬು ನಾನಾಗೌಡ ಬಿರಾದಾರ(28) ಅನ್ನೋ ಯುವಕ ವಿಷ ಸೇವಿಸಿ ಸಾವನ್ನಪ್ಪಿದ್ದು, ಇದಕ್ಕೆ ಪತ್ನಿ ಹಾಗೂ ಅವಳೊಂದಿಗೆ ಅಕ್ರಮ ಸಂಬಂಧ ಹೊಂದಿದ ವ್ಯಕ್ತಿಯೇ ಕಾರಣವೆಂದು ದೂರು ನೀಡಲಾಗಿದೆ.

ಮೃತನ ಬಾಬುನ ಪತ್ನಿ ಸಿಂದಗಿಯ ವ್ಯಕ್ತಿಯೊಬ್ಬನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಕಳೆದ 15 ದಿನಗಳ ಹಿಂದೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಆರೋಪಿತರು ನಮ್ಮ ಸಂಬಂಧ ಬಿಡುವುದಿಲ್ಲ. ನೀನು ಸಾಯಿ ಹೋಗು ಎಂದು ಹೇಳಿದ್ರಿಂದ ಮಾನಸಿಕವಾಗಿ ನೊಂದು ವಿಷ ಕೊಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಈ ಘಟನೆಯಿಂದಾಗಿ ಬಾಬು ಏಪ್ರಿಲ್ 4ರಂದು ತನ್ನ ಜಮೀನಿಗೆ ಹೋಗಿ ವಿಷ ಸೇವಿಸಿದ್ದಾನೆ. ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಿಸದೆ ಏಪ್ರಿಲ್ 6ರಂದು ಮೃತಪಟ್ಟಿದ್ದಾನೆ. ಈತನ ಸಾವಿಗೆ ಪತ್ನಿ ಹಾಗೂ ಇವಳೊಂದಿಗೆ ಅಕ್ರಮ ಸಂಬಂಧ ಹೊಂದಿದ ವ್ಯಕ್ತಿಯೇ ಕಾರಣವೆಂದು ಕುಟುಂಬಸ್ಥರು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!