‘ಜೆಕೆ’ ಮುಡಿಗೆ ಏಷಿಯನ್ ಪ್ರಶಸ್ತಿ ಗರಿ!

1087

ನಟ ಕಾರ್ತಿಕ ಜಯರಾಂ ಅಂದ್ರೆ ಬಹುತೇಕರಿಗೆ ಗೊತ್ತಾಗುವುದಿಲ್ಲ. ಆದ್ರೆ, ಜೆಕೆ ಅಂದ್ರೆ ಸಾಕು ತಕ್ಷಣ ಎಲ್ಲರಿಗೂ ನೆನಪಾಗುತ್ತೆ. ಕನ್ನಡ ಸಿನಿ ದುನಿಯಾ ಸೇರಿ ಸೌಥ್ ಇಂಡಿಯನ್ ಸಿನಿ ಲೋಕ ಸೇರಿದಂತೆ ಬಾಲಿವುಡ್ ನಲ್ಲಿ ಮಿಂಚುತ್ತಿರುವ ನಟ. ಇಂಥಾ ಜೆಕೆ ಇದೀಗ ಬೆಸ್ಟ್ ಏಷಿಯನ್ ಆಕ್ಟರ್ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.

ನ್ಯೂ ವಿಷನ್ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವೆಲ್ ನಡೆಸುವ ಅಂತಾರಾಷ್ಟ್ರೀಯ ಮಟ್ಟದ ಪ್ರಶ್ತಿಗೆ ನಾಮಿನೇಟ್ ಆಗಿದ್ದಾರೆ. ಈ ಪ್ರಶಸ್ತಿಗೆ ಆಯ್ಕೆಯಾದ ಕನ್ನಡದ ಏಕೈಕ ನಟ ಅನ್ನೋದು ಹೆಮ್ಮೆ ಪಡುವ ವಿಷಯ. ಡೆಡ್ಲಿ-2 ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಜೆಕೆ ಹಲವಾರು ಸಿನಿಮಾಗಳಲ್ಲಿ ವಿಲನ್ ಆಗಿ ಮಿಂಚಿದ್ದಾರೆ. ಕಿರುತೆರೆಯಲ್ಲಿ ಸೂಪರ್ ಸ್ಟಾರ್ ಜೆಕೆ ಆಗಿ ಮಿಂಚಿದ ಕಾರ್ತಿಕ ಜಯರಾಂ, ಜೆಕೆ ಎಂದೆ ಖ್ಯಾತರಾದ್ರು.




Leave a Reply

Your email address will not be published. Required fields are marked *

error: Content is protected !!