ನಿನ್ನೆಯಷ್ಟೇ ಆ ಫೋಟೋ ಅಪ್ಲೋಡ್ ಮಾಡಿದ್ದ ಚಿರು

429

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಯುವ ನಟ ಚಿರಂಜೀವಿ ಸರ್ಜಾ ಎಲ್ಲರನ್ನ ಅಗಲಿ ವಿಧಿವಶರಾಗಿದ್ದಾರೆ. ಕೇವಲ 39 ವರ್ಷಕ್ಕೆ ತಮ್ಮ ಜೀವನ ಪಯಣ ಮುಗಿಸಿದ್ದಾರೆ. ಚಿರು ನಿಧನಕ್ಕೆ ರಾಜಕೀಯ ಗಣ್ಯರು, ಚಿತ್ರರಂಗದ ದಿಗ್ಗಜರು ಸೇರಿದಂತೆ ಪ್ರತಿಯೊಬ್ಬರು ಸಂತಾಪ ಸೂಚಿಸ್ತಿದ್ದಾರೆ.

ವಿಧಿ ನೋಡಿ ಎಷ್ಟೊಂದು ಕ್ರೂರಿ. ನಿನ್ನೆಯಷ್ಟೇ ತಮ್ಮ ಬಾಲ್ಯದ ಫೋಟೋವನ್ನ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ರು. ಮೊದಲು, ಈಗ.. ನಾವು ಯಾಗಲೂ ಒಂದೇ.. ಏನ್ ಹೇಳ್ತೀರಿ ಎಂದು ಸಾಲುಗಳನ್ನ ಬರೆದು ಶೇರ್ ಮಾಡಿದ್ರು. ಆದ್ರೆ, ಇಂದು ಅವರೆ ಇಲ್ಲ. ಇದನ್ನ ನೋಡ್ತದ್ರೆ ಎಂಥವರಿಗಾದ್ರೂ ಕಣ್ಣೀರು ಬರುತ್ತೆ. ಇಷ್ಟೊಂದು ಚಿಕ್ಕ ವಯಸ್ಸಿಗೆ ಹೀಗೆ ಆಗಿರೋದು ಎಲ್ಲರಿಗೂ ಶಾಕ್ ಆಗಿದೆ.




Leave a Reply

Your email address will not be published. Required fields are marked *

error: Content is protected !!