ಹಿಂದೂಸ್ಥಾನಿ ಖ್ಯಾತ ಗಾಯಕಿ ಪ್ರಭಾ ಅತ್ರೆ ನಿಧನ

155

ಪ್ರಜಾಸ್ತ್ರ ಸುದ್ದಿ

ಪುಣೆ: ಹಿಂದೂಸ್ಥಾನಿ ಸಂಗೀತ ಕ್ಷೇತ್ರದ ಖ್ಯಾತ ಗಾಯಕಿ ಪ್ರಭಾ ಅತ್ರೆ ಶನಿವಾರ ಪುಣೆಯಲ್ಲಿ ನಿಧನರಾಗಿದ್ದಾರೆ. 92 ವರ್ಷದ ಹಿರಿಯ ಗಾಯಕಿಗೆ ಹೃದಯಾಘಾತವಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೂ ಬದುಕುಳಿಯಲಿಲ್ಲ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಪ್ರಭಾ ಅತ್ರೆ ಸಂಗೀತ ಕ್ಷೇತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಭಾರತದ ಶ್ರೇಷ್ಠ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ(1990), ಪದ್ಮಭೂಷಣ(2002) ಹಾಗೂ ಪದ್ಮ ವಿಭೂಷಣ(2022) ನೀಡಿ ಗೌರವಿಸಲಾಗಿದೆ.

ಅತ್ರೆ ಕುಟುಂಬದ ಸದಸ್ಯರು ವಿದೇಶದಲ್ಲಿ ನೆಲೆಸಿದ್ದಾರೆ. ಅವರು ಬಂದ ಬಳಿಕ ಅಂತಿಮ ವಿಧಿ ವಿಧಾನ ನಡೆಸಲಾಗುವುದು ಎಂದು ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!