ಮಮತಾ ಬ್ಯಾನರ್ಜಿ ಹಣೆಗೆ ಗಂಭೀರ ಗಾಯ

112

ಪ್ರಜಾಸ್ತ್ರ ಸುದ್ದಿ

ಕೊಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮನೆಯಲ್ಲಿ ಬಿದ್ದು ಹಣೆಗೆ ಗಂಭೀರ ಗಾಯವಾಗಿದೆ. ಗುರುವಾರ ರಾತ್ರಿ ಅಚಾನಕ್ ಆಗಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಎಸ್ಎಸ್ ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಣೆ ಹಾಗೂ ಮೂಗಿನ ಮೇಲೆ ಗಾಯಗಳಾಗಿದ್ದು, ಹಣೆಗೆ ಹೊಲಿಗೆಗಳನ್ನು ಹಾಕಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಮಣಿಮೋಯ್ ತಿಳಿಸಿದ್ದಾರೆ. ಇಸಿಜಿ, ಸಿಟಿ ಸ್ಕ್ಯಾನಿಂಗ್ ಹಾಗೂ ಡಾಪ್ಲರ್ ಸೇರಿದಂತೆ ಇತರೆ ಪರೀಕ್ಷೆಗಳನ್ನು ಮಾಡಲಾಗಿದೆ. ನಿಗಾದಲ್ಲಿ ಇರಬೇಕು ಎಂದರು ಕೇಳದೆ ಮನೆಗೆ ತೆರಳಿದ್ದಾರೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!