ಟ್ರಂಪ್ ಗೂ ಕಾಡಿದ ಕರೋನಾ ಭೀತಿ

349

ವಾಷಿಂಗ್ಟನ್: ಅಮೆರಿಕ ಅಧ್ಯಕ್ ಡೊನಾಲ್ಡ್ ಟ್ರಂಪ್ ಗೂ ಕರೋನಾ ಭೀತಿ ಕಾಡಿದೆ. ಹೀಗಾಗಿ ಅವರು ಸಹ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ಇದಕ್ಕೆ ಕಾರಣವಾಗಿದ್ದು ಕೆಲ ದಿನಗಳ ಹಿಂದೆ ಬ್ರೆಜಿಲ್ ನಿಯೋಗವನ್ನ ಭೇಟಿ ಮಾಡಿರುವುದು.

ಹೌದು, ಅಮೆರಿಕ ಅಧ್ಯಕ್ಷ ಟ್ರಂಪ್, ಕೆಲ ದಿನಗಳ ಹಿಂದೆ ಬ್ರೆಜಿಲ್ ನಿಯೋಗ ಭೇಟಿ ಮಾಡಿದ್ರು. ಈ ನಿಯೋಗದಲ್ಲಿ ಒಬ್ಬರಿಗೆ ಕರೋನಾ ವೈರಸ್ ಇರುವುದು ಕಂಡು ಬಂದಿತ್ತು. ಹೀಗಾಗಿ ಅನುಮಾನ ಬಂದು ವೈದ್ಯಕೀಯ ತಪಾಸಣೆ ನಡೆಸಿದ್ದಾರೆ. ಇವರಿಗೆ ಕರೋನಾ ಸೋಂಕು ತಗುಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಮಾತ್ನಾಡಿರುವ ಟ್ರಂಪ್, ನನ್ನನ್ನು ವೈದ್ಯಕೀಯ ತಪಾಸಣೆ ಮಾಡಲಾಗಿದೆ. ಕರೋನಾ ಲಕ್ಷಣಗಳು ಇಲ್ಲವೆಂದು ತಿಳಿದಿದ್ದು, ನಾನು ಆರೋಗ್ಯವಾಗಿದ್ದೇನೆ ಎಂದಿದ್ದಾರೆ. ಅಲ್ದೇ, ಅಮೆರಿಕದಲ್ಲಿ ಇದುವರೆಗೂ 2,200 ಜನರಲ್ಲಿ ಕರೋನಾ ಹರಡಿದ್ದು 50 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!