ಅಫ್ಜಲಪುರ ಸೋಂಕಿತ ವ್ಯಕ್ತಿಯ ಸಂಪರ್ಕ: ಸಿಂದಗಿ ತಾಲೂಕಿನ 12 ಮಂದಿ ಕ್ವಾರಂಟೈನ್

2198

ಸಿಂದಗಿ: ಮೇ 10ರಂದು ಬಂದ ಹೆಲ್ತ್ ಬುಲೆಟಿನ್ ನಲ್ಲಿ ಕಲಬುರಗಿ ಜಿಲ್ಲೆ ಅಫ್ಜಲಪುರ ತಾಲೂಕಿನಲ್ಲಿ ಓರ್ವನಿಗೆ ಕರೋನಾ ಸೋಂಕು ದೃಢಪಟ್ಟಿದೆ. ಈ ವ್ಯಕ್ತಿಯ ಸಂಚಾರದ ಹಿಸ್ಟರಿ ನೋಡಿದಾಗ, ಈತ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಎರಡು ಗ್ರಾಮಗಳಲ್ಲಿ ಸಂಚರಿಸಿರುವುದು ತಿಳಿದು ಬಂದಿದೆ. ಹೀಗಾಗಿ ಈತನ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನ ಕ್ವಾರಂಟೈನ್ ಮಾಡಲಾಗಿದೆ.

ಪೆಸೆಂಟ್ ನಂಬರ್ 805, ತಾಲೂಕಿನ ಸೋಮಜಾಳ ಹಾಗೂ ಬೊಮ್ಮನಹಳ್ಳಿ ಗ್ರಾಮಕ್ಕೆ ಬಂದು ಹೋಗಿದ್ದಾನೆ. ಹೀಗಾಗಿ ಈತನ ಪ್ರಾಥಮಿಕ ಸಂಪರ್ಕಕ್ಕೆ ಬಂದ 12 ಜನರನ್ನ ಸಂಸ್ಥಾ ಕ್ವಾರಂಟೈನ್ ಮಾಡಲಾಗಿದೆ. ಮೇ 4 ರಂದು ಬೊಮ್ಮನಳ್ಳಿ ಗ್ರಾಮಕ್ಕೆ ಬಂದು ಒಬ್ಬರ ಮನೆಯಲ್ಲಿ ಊಟ ಮಾಡಿದ್ದಾನೆ. ಆ ಮನೆಯ ನಾಲ್ಕು ಜನರು ಈತನ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಆಗಿದ್ದಾರೆ.

ಬಳಿಕ ಅದೆ ಗ್ರಾಮದ ಮತ್ತೊಬ್ಬರ ಮನೆಯ ಕಿಟಕಿ ಹಾಗೂ ಬಾಗಿಲು ಕೆಲಸ ಮಾಡಿದ್ದಾನೆ. ಹೀಗಾಗಿ ಆ ಮನೆಯ 7 ಜನ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಆಗಿದ್ದಾರೆ. ಮರುದಿನ ಮೇ 5 ರಂದು, ಸೋಮಜಾಳ ಗ್ರಾಮಕ್ಕೆ ಬಂದಿದ್ದಾನೆ. ಇಲ್ಲಿ ಸಹ ಒಬ್ಬರ ಮನೆಯ ಬಾಗಿಲು ಕೆಲಸ ಮಾಡಿದ್ದಾನೆ. ಹೀಗಾಗಿ ಈತನ ಪ್ರಾಥಮಿಕ ಸಂಪರ್ಕಕ್ಕೆ ಓರ್ವ ಬಂದಿದ್ದಾನೆ. ಹೀಗೆ ಇವನ ಸಂಪರ್ಕಕ್ಕೆ ಬಂದ 12 ಜನರನ್ನ ಮುಂಜಾಗ್ರತ ಕ್ರಮವಾಗಿ ಸಂಸ್ಥಾ ಕ್ವಾರಂಟೈನ್ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!