ಬಾಗಲಕೋಟೆಯಲ್ಲಿ ಸ್ವಲ್ಪ ನಿರಾಳ.. ಆದ್ರೂ ಟೆನ್ಷನ್ ಇದೆ…

298

ಬಾದಾಮಿ: ಬಾಗಲಕೋಟೆ ಜಿಲ್ಲೆಯಲ್ಲಿ ನಿನ್ನೆ 13 ಕೋವಿಡ್ 19 ಕೇಸ್ ಗಳು ಪತ್ತೆಯಾಗುವ ಮೂಲಕ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ತಾಲೂಕಿನ ಡಾಣಕಶಿರೂರು ಗ್ರಾಮದ ಗರ್ಭಿಣಿಯೊಬ್ಬರಿಂದ 12 ಜನರಿಗೆ ಸೋಂಕು ತಗುಲಿತ್ತು. ಅಲ್ದೇ, ಇವರು ಪ್ರಾಥಮಿಕ ಸಂಪರ್ಕದಲ್ಲಿದ್ದ 15 ಜನರನ್ನ ತಪಾಸಣೆ ಮಾಡಲಾಗಿದೆ.

ಇದೀಗ 15 ಜನ ವರದಿ ನೆಗೆಟಿವ್ ಬಂದಿದ್ದು, ತಾಲೂಕಿನ ಜನರಲ್ಲಿ ನಿರಾಳತೆ ಮೂಡಿದೆ. ಇದರ ಜೊತೆಗೆ ಗ್ರಾಮದ ಇನ್ನು 45 ಜನರ ವರದಿಯ ನಿರೀಕ್ಷೆಯಲ್ಲಿ ಜಿಲ್ಲಾಡಳಿತವಿದೆ. ಇನ್ನು ನಿನ್ನೆ ಸೋಂಕು ಕಾಣಿಸಿಕೊಂಡವರ ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕದಲ್ಲಿದ್ದವರ ಪತ್ತೆ ಕೆಲಸ ನಡೆಯುತ್ತಿದೆ. ಅಲ್ದೇ ಗರ್ಭಿಣಿಯ ಸಂಪರ್ಕಕ್ಕೆ ಬಂದಿದ್ದ 125ಕ್ಕೂ ಹೆಚ್ಚು ಜನರನ್ನ ಚಿಕ್ಕಮುಚ್ಚಳಗುಡ್ಡ ಗ್ರಾಮದ ಬಳಿಯ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!