ಕೋವಿಡ್ 19 ಸಿಎಂ ಪರಿಹಾರ ನಿಧಿಗೆ ಬಂದಿರುವ ಹಣವೆಷ್ಟು ಗೊತ್ತಾ?

312

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೋವಿಡ್ 19 ಮಾರಕ ರೋಗದ ವಿರುದ್ಧ ಹೋರಾಡಲು ರಾಜ್ಯ ಸರ್ಕಾರ ಸಾರ್ವಜನಿಕರಿಂದ ಪರಿಹಾರ ನಿಧಿ ಕೇಳಿತ್ತು. ಯಾಕಂದ್ರೆ, ಆರ್ಥಿಕವಾಗಿ ಸರ್ಕಾರ ಕಷ್ಟದಲ್ಲಿತ್ತು. ಹೀಗಾಗಿ ಪರಿಹಾರ ನಿಧಿ ಸ್ಥಾಪಿಸಿತ್ತು. ಜನರು ತಮ್ಮ ಶಕ್ತಿಗೆ ಅನುಸಾರವಾಗಿ ಎಷ್ಟು ನೀಡಲು ಆಗುತ್ತೋ ಅಷ್ಟೊಂದು ಸಹಾಯ ಮಾಡಿದ್ದಾರೆ. ಮಾಡ್ತಿದ್ದಾರೆ.ಹಾಗಾದ್ರೆ ಇದುವರೆಗೂ ಸಿಎಂ ಪರಿಹಾರ ನಿಧಿಗೆ ಬಂದಿರುವ ಹಣವೆಷ್ಟು ಗೊತ್ತಾ?

ಟಿ.ನರಸಿಂಹಮೂರ್ತಿ ಎಂಬುವರು ಆರ್ ಟಿಐ ಮೂಲಕ ಮಾಹಿತಿ ಪಡೆದುಕೊಂಡಿದ್ದು, ಅದರ ಆಧಾರದ ಮೇಲೆ ಮಾರ್ಚ್ 25ರಿಂದ ಮೇ 15ರ ತನಕ ಸಿಎಂ ಪರಿಹಾರ ನಿಧಿಗೆ 267 ಕೋಟಿ ರೂಪಾಯಿ ಬಂದಿದೆ. ಈ ಹಣವನ್ನ ಕೋವಿಡ್ 19 ನಿಯಂತ್ರಣಕ್ಕಾಗಿ ತುರ್ತು ಆಪತ್ತು ನಿಧಿಯಾಗಿ ಬಳಸಲು ನಿರ್ಧರಿಸಿದೆಯಂತೆ.

ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿದ ಸಾರ್ವಜನಿಕರು, ರೈತರು, ಕೂಲಿ ಕಾರ್ಮಿಕರು, ವೃದ್ಧರು, ಸಂಘ, ಸಂಸ್ಥೆಗಳು, ಸಿನಿಮಾ ರಂಗದವರು, ಕ್ರೀಡಾ ತಾರೆಯರು ಸೇರಿದಂತೆ ಅನೇಕರು ನೆರವಿನ ಹಸ್ತ ಚಾಚಿದ್ರು. ಅದು ಇದೀಗ 267 ಕೋಟಿ ಆಗಿದೆ.




Leave a Reply

Your email address will not be published. Required fields are marked *

error: Content is protected !!