ಕರೋನಾದಿಂದ ಸಾವು: ಯಾವ ವಯಸ್ಸಿನವರ ಪ್ರಮಾಣ ಹೆಚ್ಚು?

342

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶದಲ್ಲಿ ಕರೋನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದರ ಜೊತೆಗೆ ಸಾವಿನ ಪ್ರಮಾಣ ಸಹ ಏರಿಕೆ ಕಾಣುವ ಮೂಲಕ ಆತಂಕ ಮೂಡಿಸಿದೆ. ದೇಶದಲ್ಲಿ 18,64,561 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

12,35,841 ಜನರು ಗುಣಮುಖರಾಗಿದ್ದು, 5,89,663 ಪ್ರಕರಣಗಳು ಸಕ್ರಿಯವಾಗಿವೆ. ಇದರಲ್ಲಿ 39,057 ಜನರು ಇದುವರೆಗೂ ಸಾವನ್ನಪ್ಪಿದ್ದಾರೆ. ಈ ಸಾವಿನ ಪ್ರಮಾಣದಲ್ಲಿ ಶೇಕಡ 50ರಷ್ಟು ಜನರು 60 ವರ್ಷ ಮೇಲ್ಪಟ್ಟವರು ಎಂದು ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ ಭೂಷಣ ಹೇಳಿದ್ದಾರೆ.

ಇನ್ನು 45-60 ವರ್ಷ ಒಳಗಿನವರ ಸಾವಿನ ಪ್ರಮಾಣ ಶೇಕಡ 37ರಷ್ಟು ಇದೆ. ಇನ್ನು ರಾಜ್ಯಗಳು ಪರೀಕ್ಷಾ ಸಾಮರ್ಥ್ಯ ಹಾಗೂ ಚೇತರಿಕೆ ಪ್ರಮಾಣ ಏರಿಕೆ ಕಾಣಿಸಿಕೊಂಡಿವೆ. 28 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಪ್ರತಿ ಮಿಲಿಯನ್ ಜನರಲ್ಲಿ ದಿನಕ್ಕೆ 140ಕ್ಕೂ ಹೆಚ್ಚು ಪರೀಕ್ಷೆಗಳನ್ನ ನಡೆಸುತ್ತಿವೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!