ರಾಜ್ಯದಲ್ಲಿ ಕರೋನಾ ಸೋಂಕಿತರ ಲಿಸ್ಟ್ ಹೀಗಿದೆ

363

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗ್ತಿದೆ. ಇಂದು 9 ಹೊಸ ಪ್ರಕರಣಗಳು ನಡೆದಿವೆ. ಇದ್ರಿಂದಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 110ಕ್ಕೆ ಏರಿಕೆಯಾಗಿದೆ. ಇದರಲ್ಲಿ 9 ಜನ ಗುಣಮುಖರಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ.

ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ 98 ಮಂದಿಗಳಲ್ಲಿ ಓರ್ವ ಗರ್ಭಿಣಿ ಸೇರಿ 95 ಜನರು ಐಸೋಲೇಷನ್ ನಲ್ಲಿದ್ದಾರೆ. ಮೂವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಹೊಸದಾಗಿ ಪತ್ತೆಯಾಗಿರುವ 9 ಕೇಸ್ ಗಳಲ್ಲಿ 4 ಬೆಂಗಳೂರು, ಇಬ್ಬರು ಮೈಸೂರು, ಇಬ್ಬರು ನಂಜಗೂಡು ಹಾಗೂ ಇನ್ನೊಬ್ಬ ದಕ್ಷಿಣ ಕನ್ನಡದ ಮೂಲದವನಾಗಿದ್ದು ಪುತ್ತೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.




Leave a Reply

Your email address will not be published. Required fields are marked *

error: Content is protected !!