ಸೆ.1ರಿಂದ ಅನ್ ಲಾಕ್ 4.0: ಯಾವುದಕ್ಕೆಲ್ಲ ಅನುಮತಿ?

342

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಹಂತ ಹಂತವಾಗಿ ಲಾಕ್ ಡೌನ್ ತೆರವುಗೊಳಿಸ್ತಿರುವ ಕೇಂದ್ರ ಸರ್ಕಾರ, ಇದೀಗ ಸೆಪ್ಟೆಂಬರ್ 1ರಿಂದ ಅನ್ ಲಾಕ್ 4.0 ಪ್ರಕ್ರಿಯೆಗೆ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ಸೆಪ್ಟೆಂಬರ್ 1ರಿಂದ ಮೆಟ್ರೋ ಹಾಗೂ ರೈಲು ಸೇವೆಗೆ ಅನುಮತಿ ನೀಡಿದೆ.

ಇದರ ಜೊತೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಕಂಟೈನ್ಮೆಂಟ್ ಝೋನ್ ಗಳಲ್ಲಿ ಲಾಕ್ ಡೌನ್ ಗೆ ಅನುಮತಿ ನೀಡಲಾಗಿದೆ. ಆದ್ರೆ, ಇನ್ಮುಂದೆ ರಾಜ್ಯ ಸರ್ಕಾರಗಳು ಲಾಕ್ ಡೌನ್ ಮಾಡುವಂತಿಲ್ಲ. ಏನಿರುತ್ತೆ? ಏನಿರಲ್ಲ ಇಲ್ಲಿದೆ ನೋಡಿ..

ಏನಿರುತ್ತೆ?

ಆನ್ಲೈನ್ ಶಿಕ್ಷಣ ಮುಂದುವರಿಕೆ

ಅಂತಾರಾಜ್ಯ ನಿರ್ಬಂಧ ಇಲ್ಲ

ಬಯಲುರಂಗ ಮಂದಿರಕ್ಕೆ ಅವಕಾಶ

ಸಭೆ, ಸಮಾರಂಭಗಳಿಗೆ 100 ಜನ ಸೇರಿಸಲು ಅವಕಾಶ

ರಿಸರ್ಚ್ ಗಳಿಗೆ ಅವಕಾಶ

ಏನಿರಲ್ಲ?

ಥಿಯೇಟರ್, ಮಲ್ಟಿಪ್ಲೆಕ್ಸ್, ಸ್ವಿಮ್ಮಿಂಗ್ ಪೂಲ್

ಸೆಪ್ಟೆಂಬರ್ 30ರ ತನಕ ಶಾಲಾ-ಕಾಲೇಜು ತೆರೆಯುವಂತಿಲ್ಲ

ಮನರಂಜನಾ ಪಾರ್ಕ್ ಓಪನ್ ಮಾಡುವಂತಿಲ್ಲ

ಅಂತಾರಾಷ್ಟ್ರೀಯ ವಿಮಾನ ಸಂಚಾರ ಇರುವುದಿಲ್ಲ

ಹೀಗೆ ಕೆಲವೊಂದು ವಿನಾಯ್ತಿ ನೀಡಲಾಗಿದೆ. ಇನ್ನು ಕೆಲವೊಂದಿಷ್ಟು ನಿರ್ಬಂಧಗಳನ್ನು ಮುಂದುವರೆಸಲಾಗಿದೆ.




Leave a Reply

Your email address will not be published. Required fields are marked *

error: Content is protected !!