ಕೋವಿಡ್ ಹೆಚ್ಚಳ, ಮತ್ತೆ ನಗರ ತೊರೆಯುತ್ತಿರುವ ಜನತೆ

243

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ದೇಶದಲ್ಲಿ ಕೋವಿಡ್ ಎರಡನೇ ಅಲೆ ಜೋರಾಗಿದೆ. ಜನರು ತೋರುತ್ತಿರುವ ನಿರ್ಲಕ್ಷ್ಯದಿಂದಾಗಿ ಸೋಂಕಿನ ಪ್ರಮಾಣ ವ್ಯಾಪಕವಾಗಿ ಏರಿಕೆಯಾಗ್ತಿದೆ. ಸರ್ಕಾರವೂ ಸೂಕ್ತ ಕ್ರಮ ತೆಗೆದುಕೊಳ್ಳದೆ ಗಂಟೆಗೊಂದು, ದಿನಕ್ಕೊಂದು ಹೇಳಿಕೆ ನೀಡುವ ಮೂಲಕ, ಸಂಕಷ್ಟದ ಸರಣಿ ಮುಂದುವರೆಸಿದೆ.

ಕಳೆದ ನಗರ ಪ್ರದೇಶಗಳನ್ನ ತೊರೆದು ಹಳ್ಳಿಗಳ ಕಡೆ ಮುಖ ಮಾಡಿದ್ದ ಅಸಂಖ್ಯಾತ ಕಾರ್ಮಿಕರು, ಈಗ ಮತ್ತೆ ಅದೆ ದಾರಿ ಹಿಡಿದಿದ್ದಾರೆ. ಕರೋನಾ ಒಂದು ಹಂತಕ್ಕೆ ಬಂದಿದೆ ಎಂದು ನಗರದ ಕಡೆ ಮತ್ತೆ ಮುಖ ಮಾಡಿದ್ದರು. ಈಗ ಮತ್ತೆ ಲಾಕ್ ಡೌನ್ ಭಯ ಶುರುವಾಗಿದ್ದು, ಊರಿನತ್ತ ಹೆಜ್ಜೆ ಹಾಕ್ತಿದ್ದಾರೆ.

ರಾಜ್ಯದಲ್ಲಿ ಸಿಲಿಕಾನ್ ಸಿಟಿ ಕೋವಿಡ್ ಹಾಟ್ ಸ್ಪಾಟ್ ಆಗಿದೆ. ದಿನಕ್ಕೆ ಸರಾಸರಿ 10 ಸಾವಿರ ಮೇಲೆ ಸೋಂಕಿತರು ಕಾಣಿಸಿಕೊಳ್ತಿದ್ದಾರೆ. ಮೃತಪಟ್ಟವರ ಅಂತ್ಯಸಂಸ್ಕಾರ ಮಾಡಲು ಸಹ ಕಷ್ಟಪಡಬೇಕಾದ ವಾತಾವರಣ ನಿರ್ಮಾಣವಾಗಿದೆ. ಚಿತಾಗಾರದಲ್ಲಿ ಹೆಣಗಳ ರಾಶಿ ಕಂಡು ಜನತೆಗೆ ಅಕ್ಷರಶಃ ಆತಂಕಕ್ಕೆ ಒಳಗಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!