ಪುರಸಭೆ ಚುನಾವಣೆ: ಶೇಕಡ 68 ಮತದಾನ.. ವೋಟಿಂಗ್ ಹೈಲೆಟ್ಸ್ ಇಲ್ಲಿದೆ..

401

ಸಿಂದಗಿ: ಕಳೆದ ಹದಿನೈದು ದಿನಗಳಿಂದ ಪಟ್ಟಣದಲ್ಲಿ ರಾಜಕೀಯ ಚಟುವಟಿಕೆ ಬಿರುಸಿನಿಂದ ಕೂಡಿತ್ತು. 23 ವಾರ್ಡ್ ಗಳ ಎಲೆಕ್ಷನ್ ಗೆ ಸಂಬಂಧಿಸಿದ ಕೆಲಸ ಭರದಿಂದ ಕೂಡಿತ್ತು. ಇಂದು ಮತದಾನ ನಡೆಯುವ ಮೂಲಕ ಒಂದು ಹಂತದ ಟೆನ್ಷನ್ ಮುಗಿದಿದೆ. ಇದೀಗ ಉಳಿದಿರುವುದು ಫಲಿತಾಂಶದ ಬಿಗ್ ಟೆನ್ಷನ್. ಅದು ಫೆಬ್ರವರಿ 11ಕ್ಕೆ ಹೊರ ಬೀಳಲಿದೆ.

ಇಂದು ನಡೆದ ವೋಟಿಂಗ್ ನ ಹೈಲೆಟ್ಸ್ ವಿಷಯಗಳನ್ನ ನೋಡುವುದಾದರೆ…

ಹೈರಾಣಾದ ಮತದಾರ:

23 ವಾರ್ಡ್ ಗಳಿಗೆ ಇಂದು ನಡೆದ ಮತದಾನದಲ್ಲಿ ವೋಟರ್ಸ್ ಹೈರಾಣಾದ್ರು. ಇದಕ್ಕೆ ಕಾರಣವಾಗಿರೋದು ವಾರ್ಡ್ ಬಿಟ್ಟು ವಾರ್ಡ್ ನಲ್ಲಿ ಮತದಾರರ ಹೆಸರು ಇರುವುದು. ಕುಟುಂಬದಲ್ಲಿಯೇ ಒಬ್ಬೊಬ್ಬರ ವೋಟ್ ಒಂದೊಂದು ಕಡೆ ಬಂದಿರುವುದ್ರಿಂದ ಮತದಾನ ಮಾಡಲು ಬೂತ್ ಬೂತ್ ಹುಡುಕಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದ್ರಿಂದ ವೋಟರ್ಸ್ ಸುಸ್ತಾದ್ರು.

ವೃದ್ಧರು, ವಿಕಲಚೇತನರ ವೋಟಿಂಗ್:

ಅನೇಕ ವಾರ್ಡ್ ಗಳಲ್ಲಿ 90ಕ್ಕೂ ಹೆಚ್ಚು ವಯಸ್ಸಾದ ವೃದ್ಧರು ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ವಿಕಲಚೇತನರು ಸಹ ಮತದಾನಲ್ಲಿ ಭಾಗವಹಿಸಿ ಸಂವಿಧಾನಬದ್ಧ ಹಕ್ಕು ಚಲಾಯಿಸುವ ಮೂಲಕ ವೋಟ್ ಮಾಡದೆ ಮನೆಯಲ್ಲಿಯೇ ಕುಳಿತವರಿಗೆ ಮಾದರಿಯಾದ್ರು.

ಅನೇಕ ಕಡೆ ನೀತಿ ಸಂಹಿತೆ ಉಲ್ಲಂಘನೆ:

ಮತದಾನದ ಟೈಂನಲ್ಲಿ ಅನೇಕ ಕಡೆ ನೀತಿ ಸಂಹಿತೆ ಉಲ್ಲಂಘನೆಯಾಗಿರುವ ಘಟನೆಗಳು ನಡೆದಿವೆ. ವೋಟ್ ಮಾಡಿರುವ ಫೋಟೋ ತೆಗೆದಿರುವುದು, ವಯಸ್ಸಾದವರ ಜೊತೆ ಅಧಿಕಾರಿ ಬದ್ಲು ಸಂಬಂಧಿಕರು ನಿಂತುಕೊಂಡು ವೋಟ್ ಮಾಡಿರುವುದು, 100 ಮೀಟರ್ ಒಳಗಡೆಯೇ ಅಭ್ಯರ್ಥಿಗಳ ಬೆಂಬಲಿಗರು ರಾಜಾರೋಷವಾಗಿ ಓಡಾಟ ನಡೆಸಿ ಇದಕ್ಕೆ ವೋಟ್ ಮಾಡಬೇಕು ಅಂತಾ ಹೇಳುವುದು ಕಂಡು ಬಂತು.

ಶಾಸಕರು ಸೇರಿ ನಾಯಕರ ಮತದಾನ:

ಶಾಸಕ ಎಂ.ಸಿ ಮನಗೂಳಿ ಅವರು ಕುಟುಂಬ ಸಮೇತರಾಗಿ 13ನೇ ವಾರ್ಡ್ ನಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದ್ರು. ಇದೇ ರೀತಿ ಕಾಂಗ್ರೆಸ್, ಬಿಜೆಪಿ, ಬಿಎಸ್ಪಿ ಲೀಡರ್ ಗಳು ವೋಟ್ ಮಾಡಿದ್ರು.

ಪೊಲೀಸ್ ಸಿಬ್ಬಂದಿ ಜೊತೆ ಏಜೆಂಟರ್ ವಾಗ್ವಾದ:

ಕೆಲವು ಮತಗಟ್ಟೆಗಳಲ್ಲಿ ಏಜಂಟರು ಹಾಗೂ ಪೊಲೀಸ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು. ಬೂತ್ ಒಳಗಡೆ ಕುಳಿತುಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬಿಬ್ಬರ ಹೆಸರು, ಗುರುತಿನ ಚೀಟಿ ಹಿಡಿದುಕೊಂಡು ಬಂದ ಕಾರಣಕ್ಕೆ ಭರ್ಜರಿ ವಾಗ್ವಾದ ನಡೆದಿವೆ.

ಹೀಗೆ ಇಂದು ನಡೆದ ಚುನಾವಣೆಯಲ್ಲಿ ಸಾಕಷ್ಟು ವಿಶೇಷತೆಗಳು ಕಂಡು ಬಂದ್ವು. ಒಟ್ಟು 31 ಸಾವಿರದ 365 ವೋಟಿಂಗ್ ಇದ್ದು, 21 ಸಾವಿರದ 556 ಮತದಾನ ನಡೆದಿದೆ. ಈ ಮೂಲಕ ಒಟ್ಟು ಶೇಕಡ 68.73 ವೋಟಿಂಗ್ ನಡೆದಿದೆ.




Leave a Reply

Your email address will not be published. Required fields are marked *

error: Content is protected !!