‘ಪ್ರಜಾಸ್ತ್ರ’ದಲ್ಲಿ ಪುರಸಭೆ ಚುನಾವಣೆ ಮತದಾನೋತ್ತರ ಸಮೀಕ್ಷೆ

492

ಸಿಂದಗಿ: ಪಟ್ಟಣದ 23 ವಾರ್ಡ್ ಗಳಿಗೆ ಇಂದು ಮತದಾನ ನಡೆದಿದೆ. ಒಟ್ಟು 31 ಸಾವಿರದ 365 ವೋಟರ್ಸ್ ಇದ್ದಾರೆ. ಇದರಲ್ಲಿ 21 ಸಾವಿರದ 556 ಮಂದಿ ಇಂದು ಮತದಾನ ಮಾಡಿದ್ದಾರೆ. ಈ ಮೂಲಕ ಒಟ್ಟು ಶೇಕಡ 68.73ರಷ್ಟು ವೋಟಿಂಗ್ ಆಗಿದೆ.

31 ಮತಗಟ್ಟೆಯಲ್ಲಿ ಭರ್ಜರಿಯಾಗಿ ಮತದಾನ ನಡೆದಿದ್ದು, ಮತದಾರರು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದ್ದಾರೆ. ಕಾಂಗ್ರೆಸ್ 19, ಜೆಡಿಎಸ್ 23, ಬಿಜೆಪಿ 20, ಬಿಎಸ್ಪಿ 6 ಹಾಗೂ ಪಕ್ಷೇತರರು 16 ಮಂದಿ ಸ್ಪರ್ಧಿಸಿದ್ದು, ಒಟ್ಟು 84 ಮಂದಿ ಸ್ಪರ್ಧಿಗಳು ಕಣದಲ್ಲಿದ್ದಾರೆ. ‘ಪ್ರಜಾಸ್ತ್ರ’ ನಡೆಸಿದ ಮತದಾನೋತ್ತರ ಸಮೀಕ್ಷೆ ಇಲ್ಲಿದೆ.

ಕ್ರಮ ಸಂಖ್ಯೆ ಪಕ್ಷ ಗೆಲ್ಲುವ ಸ್ಥಾನ
01 ಕಾಂಗ್ರೆಸ್ 08-09
02 ಜೆಡಿಎಸ್ 09-10
03 ಬಿಜೆಪಿ 01-02
04 ಬಿಎಸ್ಪಿ 00-01
05 ಪಕ್ಷೇತರರು 02-03

ಇದು ಪ್ರಜಾಸ್ತ್ರ ನಡೆಸಿದ ಮತದಾನೋತ್ತರ ಸಮೀಕ್ಷೆಯಾಗಿದ್ದು, ಈ ಬಾರಿಯೂ ಅತಂತ್ರ ಸ್ಥಿತಿ ನಿರ್ಮಾಣವಾಗುವುದು ಸ್ಪಷ್ಟವಾಗಿದೆ. ಚುನಾವಣೋತ್ತರ ಹಾಗೂ ಮತದಾನೋತ್ತರ ಸಮೀಕ್ಷೆ ಏನೇ ಇರ್ಲಿ, ಫೆಬ್ರವರಿ 11 ರಂದು ಬರುವ ಫಲಿತಾಂಶ ಅಂತಿಮವಾಗಿದ್ದು, ಯಾರಿಗೆ ಗೆಲುವಿನ ಸಿಹಿ, ಯಾರಿಗೆ ಸೋಲಿನ ಕಹಿ ಅನ್ನೋದು ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!