ಗುಜರಾತಿನಲ್ಲಿ ಸಾವಿನ ಪ್ರಮಾಣದ ಸುಳ್ಳು ಸತ್ಯದ ಸೆಣಸಾಟ.. ಚಿದಂಬರಂ ಅಂಕಿಅಂಶ ಟ್ವೀಟ್

250

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಗುಜರಾತಿನಲ್ಲಿ ಕರೋನಾ ಸೋಂಕಿನಿಂದಾಗಿ 71 ದಿನಗಳಲ್ಲಿ 1.23 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಲ್ಲಿನ ಪ್ರಸಿದ್ಧ ದಿನ ಪತ್ರಿಕೆ ದಿವ್ಯ ಭಾಸ್ಕರ ವರದಿ ಮಾಡಿದೆ. ಆದ್ರೆ, ಸರ್ಕಾರ 4,218 ಸಾವಿನ ವರದಿ ಮಾಡಿದೆ ಎಂದು ಹೇಳಿದೆ. ಈ ಮೂಲಕ ನಿಖರ ಸಾವಿನ ಅಂಕಿಅಂಶ ಮರೆಮಾಚಲಾಗ್ತಿದೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ.

ಮಾರ್ಚ್ 1 ರಿಂದ ಮೇ 10ರ ತನಕ 1.23 ಲಕ್ಷ ಮರಣ ಪ್ರಮಾಣಪತ್ರಗಳನ್ನ ನೀಡಲಾಗಿದೆ ಎಂದು ಹೇಳಿದೆ. ಆದ್ರೆ, ಇದನ್ನ ಗುಜರಾತ ಗೃಹ ಸಚಿವ ಪ್ರದೀಪ ಸಿಂಗ್ ಜಡೇಜಾ ನಿರಾಕರಿಸಿದ್ದಾರೆ. ಇನ್ನು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಟ್ವೀಟ್ ಮಾಡಿದ್ದು 2020 ಹಾಗೂ 2021ನೇ ಸಾಲಿನ ನಗರ ಹಾಗೂ ಜಿಲ್ಲಾವಾರು ಸಾವಿನ ಅಂಕಿಅಂಶದ ಲಿಸ್ಟ್ ಹಾಕಿದ್ದಾರೆ.




Leave a Reply

Your email address will not be published. Required fields are marked *

error: Content is protected !!