10 ಸಾವಿರ ಬೆಡ್ ವ್ಯವಸ್ಥೆಯ ಕೋವಿಡ್ ಕೇಂದ್ರ ಕಥೆ ಏನು?

320

ಪ್ರಜಾಸ್ತ್ರ ವಿಶೇಷ ಸುದ್ದಿ

ಬೆಂಗಳೂರು: ಬೆಂಗಳೂರು ಉತ್ತರ ತಾಲೂಕಿನ ಮಾದಾವರದ ಹತ್ತಿರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ 10,100 ಹಾಸಿಗೆ ವ್ಯವಸ್ಥೆಯ ಕೋವಿಡ್ ಆರೈಕೆ ಕೇಂದ್ರ ಸ್ಥಾಪಿಸಲಾಗಿತ್ತು. ಈ ಮೂಲಕ ದೇಶದ ಅತಿದೊಡ್ಡ ಕೋವಿಡ್ ಆರೈಕೆ ಕೇಂದ್ರ ಇದಾಗಲಿದೆ ಎಂದಿದ್ದ ಸರ್ಕಾರ ಜುಲೈ 27, 2020ರಂದು ಉದ್ಘಾಟನೆ ಮಾಡಿತ್ತು. ಹೀಗೆ ಶುರುವಾದ ಕೇಂದ್ರ ಕೇವಲ 50 ದಿನಗಳಲ್ಲಿಯೇ ಮುಚ್ಚಿ ಹೋಯ್ತು.

ಸಾಕಷ್ಟು ವಿಚಾರಗಳಿಗೆ ಸದ್ದು ಮಾಡಿದ್ದ ಬಿಐಇಸಿಯಲ್ಲಿ ಅಳವಡಿಸಿದ್ದು 6,500 ಹಾಸಿಗೆಗಳು ಅಂತೆ. 77,200 ಚದರ ಅಡಿ ವಿಸ್ತೀರ್ಣದಲ್ಲಿ ರೆಡಿಯಾದ ಕೇಂದ್ರದಲ್ಲಿ 5 ಸಭಾಂಗಣದ ವ್ಯವಸ್ಥೆ, ಒಂದರಲ್ಲಿ 2 ಸಾವಿರ ಹಾಸಿಗೆ ವ್ಯವಸ್ಥೆ ಮಾಡಲಾಗಿತ್ತು. ಇದರಲ್ಲಿ ಶೇಕಡ 30ರಷ್ಟು ಮಹಿಳೆಯರಿಗೆ ಮೀಸಲು ಇಡಲಾಗಿತ್ತು. 300 ವೈದ್ಯರು, 600 ನರ್ಸ್ ಗಳು ಕೆಲಸ ಮಾಡಲಿದ್ದಾರೆ ಅಂತಾನೂ ಸುದ್ದಿಯಾಯ್ತು.

ಈಗ ಕೋವಿಡ್ 2ನೇ ಅಲೆ ಜೋರಾಗಿದೆ. ಜನರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ. ಅದರಲ್ಲೂ ಬೆಂಗಳೂರಿನ ಸ್ಥಿತಿ ತುಂಬಾ ಗಂಭೀರವಾಗಿದೆ. ಹೀಗಾಗಿಯೇ ಸರ್ಕಾರ ನೈಟ್ ಕರ್ಫ್ಯೂ ಜೊತೆಗೆ ವೀಕೆಂಡ್ ಕರ್ಫ್ಯೂ ಸಹ ಜಾರಿ ಮಾಡಿದೆ. ಒಂದು ರೀತಿಯಿಂದ ಅಘೋಷಿತ ಲಾಕ್ ಡೌನ್ ಮಾಡಿದೆ. ಹೀಗೆ ಸಾಕಷ್ಟು ಕಠಿಣ ಕ್ರಮಗಳನ್ನ ತೆಗೆದುಕೊಳ್ಳುತ್ತಿರುವ ಸರ್ಕಾರ, ಬಿಐಇಸಿಯನ್ನು ಯಾಕೆ ಮರು ಬಳಕೆ ಮಾಡುತ್ತಿಲ್ಲ? ಇದಕ್ಕಾಗಿ ಕೋಟಿ ಕೋಟಿ ಖರ್ಚು ಮಾಡಿದ್ದು ವ್ಯರ್ಥವಾಯ್ತಾ? ಇದರ ಹಿಂದೆ ದೊಡ್ಡ ಭ್ರಷ್ಟಾಚಾರ ನಡೆದಿದೆ ಎಂದು ಅಂದೇ ವಿಪಕ್ಷಗಳು ಆರೋಪ ಮಾಡಿದ್ದು ಸತ್ಯವಾಗಿದ್ಯಾ ಅನ್ನೋ ಅನುಮಾನ ಮೂಡಿದೆ. ಇದಕ್ಕೆ ಸರ್ಕಾರ ಉತ್ತರಿಸಬೇಕಾಗಿದೆ. ಇಲ್ಲದೆ ಹೋದ್ರೆ ಜನರಿಗೆ ಕೋವಿಡ್ ನಿಂದ ರಕ್ಷಣೆ ಮಾಡ್ತೀವಿ ಅನ್ನೋ ನೆಪದಲ್ಲಿ ಅವರ ರಕ್ತ ಹೀರುವ ಕೆಲಸ ಮಾಡ್ತಿದೆ ಅನ್ನೋ ಸಾರ್ವಜನಿಕರ ಮಾತು ಸತ್ಯವಾದಂತೆ.




Leave a Reply

Your email address will not be published. Required fields are marked *

error: Content is protected !!